Simple & Easy ಬಾಂಬೆ ಸಾಗು ಒಮ್ಮೆ Try ಮಾಡಿ ಆಯ್ತಾ ಈಗ ಹೇಗೆ ಮಾಡೋದು ತಿಳಿಯೋಣ…
ಪದಾರ್ಥಗಳು:
– 2 ಟೀಸ್ಪೂನ್ ಎಣ್ಣೆ
– 1/2 ಟೀಸ್ಪೂನ್ ಸಾಸಿವೆ
– 1/2 ಟೀಸ್ಪೂನ್ ಜೀರಿಗೆ
– 1 ಟೀಸ್ಪೂನ್ ಉದ್ದಿನ ಬೇಳೆ
– 1 ಟೀಸ್ಪೂನ್ ಕಡಲೆ ಬೇಳೆ
– 1/4 ಟೀಸ್ಪೂನ್ ಇಂಗು
– 1/2 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
– 1/2 ಟೀಸ್ಪೂನ್ ಅರಶಿಣ ಪುಡಿ
– 1 ಟೊಮೆಟೋ (ಸಣ್ಣದಾಗಿ ಹೆಚ್ಚಿದ)
– 1 ಕಪ್ ಕಡಲೆ ಹಿಟ್ಟು
– 3 ಕಪ್ ನೀರು
– ಉಪ್ಪು ರುಚಿಗೆ ತಕ್ಕಷ್ಟು
– ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಹೆಚ್ಚಿದ)
ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಇಂಗು ಹಾಕಿ.
2. ಇರುಳ್ಳಿ, ಹಸಿ ಮೆಣಸು ಹಾಕಿ ಫ್ರೈ ಮಾಡಿ.
3. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಅರಶಿಣ ಪುಡಿ ಹಾಕಿ.
4. ಟೊಮೆಟೋ ಹಾಕಿ ಬೇಯಲು ಬಿಡಿ.
5. ಕಡಲೆ ಹಿಟ್ಟು, ನೀರು ಮಿಕ್ಸ್ ಮಾಡಿ, ಬಾಣಲೆಗೆ ಹಾಕಿ.
6. ಉಪ್ಪು ಹಾಕಿ, 5 ನಿಮಿಷ ಕುದಿಯಲು ಬಿಡಿ.
7. ಕೊತ್ತಂಬರಿ ಸೊಪ್ಪು ಹಾಕಿ, ಮಿಕ್ಸ್ ಮಾಡಿ.
ರುಚಿಕರ Simple & Easy ಬಾಂಬೆ ಸಾಗು ರೆಡಿಯಾಗಿದೆ!








