ಬೊಮ್ಮಾಯಿ ಹೊರಗಿಂದ ಬಂದು ಸಿಎಂ ಆಗಿದ್ದಾರೆ : ಸಿ.ಟಿ.ರವಿ
ಬೆಂಗಳೂರು : ಹೊರಗಿನಿಂದ ಬಂದವರು ಅಂಥ ಏನು ಇಲ್ಲ. ಎಲ್ಲಾ ನಮ್ಮವರೇ. ಈಗ ಬಸವರಾಜ ಬೊಮ್ಮಾಯಿ ಹೊರಗಿಂದ ಬಂದು ಸಿಎಂ ಆಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ವಲಸಿಗ ಶಾಸಕರಿಗೆ ಸಚಿವ ಸ್ಥಾನ ತಪ್ಪುವ ಬಗ್ಗೆ ಕೆ ಕೆ ಗೆಸ್ಟ್ ಹೌಸ್ ನಲ್ಲಿ ಪ್ರತಿಕ್ರಿಯೆ ನೀಡಿದ ಹೊರಗಡೆಯವರನ್ನ, ಬಿಜೆಪಿಯವರನ್ನ ನಂಬಲ್ಲ ಅಂತಾ ಅಸ್ಸೋಂನ ಸಿಎಂ ಹೇಮಂತ ವಿಶ್ವಾಸ್ ಹೇಳ್ತಾ ಇದ್ರು.
ಈಗ ಬಸವರಾಜ ಬೊಮ್ಮಾಯಿ ಹೊರಗಿಂದ ಬಂದು ಸಿಎಂ ಆಗಿದ್ದಾರೆ. ಹೊರಗಿನಿಂದ ಬಂದವರು ಅಂತಾ ಏನ್ ಇಲ್ಲ. ಎಲ್ಲಾ ನಮ್ಮವರೇ ಎಂದು ಹೇಳಿದರು.
ಇದೇ ವೇಳೆ ಬೊಮ್ಮಾಯಿ ಅವರ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ಸಾಕಷ್ಟು ಅನುಭವ ಇದೆ.
ರಾಜ್ಯದಲ್ಲಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದಾರೆ. ಎಂಎಲ್‍ಸಿ, ಎಂಎಲ್‍ಎ ಆಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ಕೊಡ್ತಾರೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದರು.