`ಶಾಲಾ ಕಾಲೇಜ್ ಗಳಿಗೆ ರಜೆ’ ನೀಡುವ ಬಗ್ಗೆ ಬೊಮ್ಮಾಯಿ ಸ್ಪಷ್ಟನೆ
ದಾವಣಗೆರೆ : ರಾಜ್ಯದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದ್ದಂತೆ ಸರ್ಕಾರ ತುರ್ತುಸಭೆಗಳನ್ನು ನಡೆಸುತ್ತಿದೆ.
ಈ ಮಧ್ಯೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುವುದು ಎಂಬ ಮಾತು ಕೂಡ ಹರಿದಾಡುತ್ತಿದೆ.
ಈ ಬಗ್ಗೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾತಿ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತೆ ಅನ್ನೊ ಆತಂಕ ಬೇಡ.
ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ನಾವು ಈಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ.
ಶಾಲಾ ಕಾಲೇಜ್ ಗಳಲ್ಲಿ ಕೋವಿಡ್ ಬಗ್ಗೆ ನಿಗಾ ವಹಿಸಿ ಅಂತಾ ಹೇಳಿದ್ದೇವೆ. ಶಾಲಾ ಕಾಲೇಜ್ ಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ ಎಂದಿದ್ದಾರೆ.
ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದೆ ಎಂದಿರುವ ಮುಖ್ಯಮಂತ್ರಿ ಬೊಮ್ಮಾಯಿ, ಹೊರ ದೇಶಗಳಿಂದ ಬಂದವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ.
ಈಗಾಗಲೇ ಕೇರಳದಿಂದ ಪ್ರತಿಯೊಬ್ಬರನ್ನ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.
ಒಂದು ವೇಳೆ ನೆಗೆಟಿವ್ ಬಂದಿದ್ದರು ಏಳು ದಿನದ ನಂತರ ಮತ್ತೆ ಟೆಸ್ಟಿಂಗ್ ಮಾಡಬೇಕು ಎಂದಿದ್ದಾರೆ.









