EMI  ಮೂಲಕ ಟಿಕೆಟ್ ಬುಕ್ ಮಾಡಿ ವಿಮಾನದಲ್ಲಿ ಹಾರಾಡಿ…

1 min read

EMI  ಮೂಲಕ ಟಿಕೆಟ್ ಬುಕ್ ಮಾಡಿ ವಿಮಾನದಲ್ಲಿ ಹಾರಾಡಿ.

ವಿಮಾನ ಹತ್ತುವುದಕ್ಕೆ ಟೈಮ್ ಗೆ ಸರಿಯಾಗಿ ಹಣ ಇಲ್ಲದಿದ್ದರೂ ಇನ್ನು ಮುಂದೆ ಚಿಂತೆ ಮಾಡಬೇಕಾಗಿಲ್ಲ.ಇ ಎಮ್ ಐ ಮೂಲಕ ಟಿಕೆಟ್ ಬುಕ್ ಮಾಡಿ ವಿಮಾನದಲ್ಲಿ ಪ್ರಯಾಣಿಸಬಹುದು. ಈಗೊಂದು ಹೊಸ ಯೋಜನೆಗೆ ವಿಮಾನಯಾನ ಸಂಸ್ಥೆಗಳು ಹೊರತಂದಿವೆ.

ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಸೋಮವಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಪ್ರಯಾಣಿಕರು ಮೂರು, ಆರು ಅಥವಾ 12 ಕಂತುಗಳಲ್ಲಿ ಟಿಕೆಟ್‌ ಹಣವನ್ನ  ಪಾವತಿಸಬಹುದು.

ಈ ಯೋಜನೆಯ ಪ್ರಾರಂಭದ ಕೊಡುಗೆಯ ಭಾಗವಾಗಿ, ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ (ಬಡ್ಡಿಯಿಲ್ಲ) ಮೂರು ತಿಂಗಳ EMI ಆಯ್ಕೆಯನ್ನು ಆನಂದಿಸಲು ಸಾಧ್ಯವಾಗುತ್ತದೆ” ಎಂದು ಏರ್‌ಲೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

EMI ಯೋಜನೆಯನ್ನು ಪಡೆಯಲು, ಪ್ರಯಾಣಿಕರು ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಥರದ ಗುರುತಿನ ವಿವರಗಳನ್ನು ಒದಗಿಸಬೇಕು ಮತ್ತು ಅದನ್ನು ಒನ್ ಟೈಮ್ ಪಾಸ್‌ವರ್ಡ್‌ನೊಂದಿಗೆ ಪರಿಶೀಲಿಸಬೇಕು ಎಂದು ಸಂಸ್ಥೆ ಹೇಳಿದೆ.

ಗ್ರಾಹಕರು ತಮ್ಮ UPI ಐಡಿಯನ್ನು ಒದಗಿಸುವ ಮೂಲಕ ಮೊದಲ EMI ಅನ್ನು ಪಾವತಿಸಬೇಕಾಗುತ್ತದೆ ಮತ್ತು ನಂತರದ EMI ಗಳನ್ನು ಅದೇ UPI ID ಯಿಂದ ಕಡಿತಗೊಳಿಸಲಾಗುತ್ತದೆ ಎಂದು ಸ್ಪೈಸಜೆಟ್ ಕಂಪನಿ ಹೇಳಿದೆ.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd