ಬೆಂಗಳೂರು: ಕನ್ನಡಿಗರೇ ಪ್ರಾರಂಭಿಸಿರುವ ಸ್ಟಾರ್ಟ್ ಅಪ್ ಬೌನ್ಸ್ ಕಂಪನಿ, ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮನೆಯಿಂದ ಕಚೇರಿ, ಬಸ್ ನಿಲ್ದಾಣದಿಂದ ಮನೆಗೆ ತೆರಳಲು ಬಸ್‍ಗಳಿಲ್ಲದೆ ಪರದಾಡುತ್ತಿರುವ ಬೌನ್ಸ್ ನ ಎಲ್ಲಾ ಗ್ರಾಹಕರು, ಇಂದು ಉಚಿತವಾಗಿ ಬೈಕ್ ರೈಡ್ ಮಾಡಬಹುದು.

ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಸಾರ್ವಜನಿಕರು ಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸೇವೆಗೆ ಧಾವಿಸಿರುವ ಬೌನ್ಸ್ ನಿಂದ ಇಂದು ತನ್ನೆಲ್ಲಾ ಆಪ್ ಗ್ರಾಹಕರಿಕೆ ಉಚಿತ ಸೇವೆ ನೀಡುವುದಾಗಿ ಘೋಷಣೆ ಮಾಡಿದೆ.
ಈ ವಿಚಾರವಾಗಿ ಖುದ್ದು ಬೌನ್ಸ್ ಸಂಸ್ಥೆಯ ಸಹ ಸಂಸ್ಥಾಪಕ ವಿವೇಕಾನಂದ ಮಾತನಾಡಿ, ಇಂದು ಬೌನ್ಸ್ ಸೇವೆ ಉಚಿತವಾಗಿದೆ. ನಮ್ಮ ವಾಹನಗಳು ಸಾರ್ವಜನಿಕರ ಬಳಕೆಗೆ ಇರುವುದು. ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿ ಈ ಆಫರ್ ನೀಡಲಾಗಿದೆ. 2020 ಕೊರೊನಾ ಸಂಕಷ್ಟದ ವರ್ಷ. ಈ ವರ್ಷ ಸಾಕಷ್ಟು ನಷ್ಟ ಅನುಭವಿಸಿರುವ ಬೌನ್ಸ್, ಜನರ ನೋವಿಗೆ ಮಿಡಿಯುವ ಪ್ರಯತ್ನವಾಗಿ ಇಂದು ಎಲ್ಲಾ ಗ್ರಾಹಕರಿಗೂ ಉಚಿತ ಸೇವೆ ನೀಡುತ್ತಿವೆ. ಇದು ನಿಮ್ಮ ವಾಹನ ಎಂದು ಭಾವಿಸಿ ಉಪಯೋಗಿಸಿ. ಇದು ಸಾರ್ವಜನಿಕರಿಗೆ ಚಿಕ್ಕ ಸೇವೆ ಬೌನ್ಸ್ ವತಿಯಿಂದ ಎಂದು ಹೇಳಿದ್ದಾರೆ.

ತನ್ನ ಗ್ರಾಹಕರಿಗೆ ವಿವಿಧ ರೀತಿಯ ಆಫರ್ ನೀಡುತ್ತಿರುವ ಬೌನ್ಸ್, ಮೊಬಿಲಿಟಿ ವೀಕ್ ಆಚರಿಸುತ್ತಿದೆ. ಸೆಂಬರ್ 12 ರಿಂದ 19ರ ವರೆಗೆ ಮೊಬಿಲಿಟಿ ವೀಕ್‍ನ ಅವಧಿಯಲ್ಲಿ ಪ್ರತಿ ದಿನವೂ ವಿಶಿಷ್ಟ ರೀತಿಯ ಆಫರ್ ನೀಡುವುದಕ್ಕೆ ಸಂಸ್ಥೆ ನಿರ್ಧರಿಸಿದೆ.
ಒಟ್ಟಾರೆ ಬಸ್ ಸೇವೆ ಇಲ್ಲದ ಸಂದರ್ಭದಲ್ಲಿ ಬೌನ್ಸ್ ಉಚಿತ ಸೇವೆಯನ್ನು ಬಳಸಿಕೊಳ್ಳವಹುದು. ಆದರೆ ಜವಾಬ್ದಾರಿಯಿಂದ ಬಳಕೆ ಮಾಡಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








