ಯುವತಿ ಕೈ ಕೊಟ್ಟಳೆಂದು ಮೊಬೈಲ್ ಟವರ್ ಏರಿ ಕುಳಿತ ಯುವಕ

1 min read

ಯುವತಿ ಕೈ ಕೊಟ್ಟಳೆಂದು ಮೊಬೈಲ್ ಟವರ್ ಏರಿ ಕುಳಿತ ಯುವಕ

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿಯ ಜೊತೆ  ಮನಸ್ತಾಪ ಉಂಟುಮಾಡಿಕೊಂಡ ಬಳಿಕ ಯುವಕನೊಬ್ಬ ಮೊಬೈಲ್ ಟವರ್ ಏರಿದ ಘಟನೆ ಸೋಮವಾರ ಬೆಳಗ್ಗೆ ಮಂಗಳೂರಿನ ಅಡ್ಯಾರ್ ಬಳಿ ನಡೆದಿದೆ.

ಬಂಟ್ವಾಳದ ಕೊಡಮನ್ ನ ಸುಧೀರ್ ಟವರ್ ಏರಿದ ಯುವಕ ಈತ ಅದೇ ಊರಿನ ಯುವತಿಯೊಬ್ಬಳನ್ನು ಪ್ರೀತಿಸುತಿದ್ದ. ಅವರಿಬ್ಬರ ನಡುವೆ ಮನಸ್ತಾಪ ಆದ ಬಳಿಕ ಈ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟು ಮನವೊಲಿಸಿದರೂ ಆತ ಕೆಳಗೆ ಇಳಿಯಲೇ ಇಲ್ಲ. ಸಿಬ್ಬದಿಗಳು ಆಯತನನ್ನ ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ.  ಕೊನೆಗೆ   ಆತನ ಪ್ರೇಯಸಿ ಬಂದ ನಂತರ ಆತ ಟವರ್ ನಿಂದ ಕೆಳಗೆ ಇಳಿದಿದ್ದಾನೆ. ಯುವಕನ ಕುರಿತಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮನವಿ ಸಲ್ಲಿಸಲಾಗಿದ್ದು, ಟವರ್ ಇಳಿದ ಬಳಿಕ ವಶಕ್ಕೆ ಪಡೆದ ಹೊಯ್ಸಳ ದವರು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Boy climbs mobile tower over love failure in mangalore

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd