ಯೂಟ್ಯೂಬ್ ನೋಡಿ ತಲೆಗೆ ಬೆಂಕಿ ಹಚ್ಚಿಕೊಂಡ 12ರ ಬಾಲಕ ಸಾವು..!
ಕೇರಳ: ಯೂಟ್ಯೂಬ್ ಒಂದೊಳ್ಳೆ ಫ್ಲಾಟ್ ಫಾರ್ಮ್ ಕಲಿಯುವುದಕ್ಕೆ, ತಿಳಿಕೊಳ್ಳೋಕೆ, ಎಕ್ಸಪೆರಿಮೆಂಟ್ , ಹೊಸತನ ಎಂಟರ್ ಟೈನ್ ಮೆಂಟ್ ಗೆ. ಆದ್ರೆ ಕೆಲವೊಮ್ಮೆ ಯೂಟ್ಯೂಬ್ ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳನ್ನ ಅದ್ರಲ್ಲಿ ತೋರಿಸುವುದನ್ನ ಫಾಲೋಮಾಡೋದಕ್ಕೆ ಹೋಗಿ ಅನೇಕ ಎಡವಟ್ಟುಗಳನ್ನ ಮಾಡಿ ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ.
ಅದ್ರಂತೆ ಕೇರಳದಲ್ಲಿ 12 ವರ್ಷದ ಬಾಲಕನೊಬ್ಬ ಯೂಟ್ಯೂಬ್ ನೋಡಿ ಕೂದಲು ನೇರ ಮಾಡಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ತಲೆಗೂದಲಿಗೆ ಸೀಮೆಎಣ್ಣೆ ಹಾಕಿ ನೇರಗೊಳಿಸಲು ಯತ್ನಿಸಿದ್ದಾನೆ. ಈ ವೇಳೆ ಬೆಂಕಿ ತಗುಲಿ ಬಾಲಕ ಮೃತಪಟ್ಟಿದ್ದಾನೆ.
ತಿರುವನಂತಪುರದ ವೆಂಗನೂರಿನಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಶಿವನಾರಾಯಣನ್ ಎಂದು ಗುರುತಿಸಿಲಾಗಿದ್ದು, ಈತ 7ನೇ ತರಗತಿ ಓದುತ್ತಿದ್ದ ಎಂದು ಹೇಳಲಾಗಿದೆ. ತನ್ನ ತಲೆ ಕೂದಲಿಗೆ ಸೀಮೆಎಣ್ಣೆ ಹಚ್ಚಿಕೊಂಡು ಬೆಂಕಿ ಕಡ್ಡಿ ಬಳಸಿ ಅದನ್ನು ನೇರಗೊಳಿಸಲು ಯತ್ನಿಸಿದ ಬಾಲಕ ಬೆಂಕಿ ತಗುಲಿ ಸಾವನಪ್ಪಿದ್ದಾನೆ.
ಮಾರ್ಚ್ 29 ಕ್ಕೆ ಬರ್ತಿದೆ ‘ವಕೀಲ್ ಸಾಹೇಬ್’ ಟ್ರೇಲರ್..!
ಅಕ್ಕಿ ಇಡುತ್ತೇನೆ ಎಂದು ಬಂದವ ಯುವತಿಯನ್ನ ಬೆತ್ತಲೆ ಮಾಡಿ ಬ್ಲಾಕ್ ಮೇಲ್ ಮಾಡಿದ..!