Boy Shoots Teacher : ಶಿಕ್ಷಕಿಗೆ ಗುಂಡು ಹಾರಿಸಿದ 6 ರ ಬಾಲಕ
ಅಮೆರಿಕಾದಲ್ಲಿ ಸೂಟೌಟ್ ಪ್ರಕರಣಗಳು ಇತ್ತೀಚೆಗೆ ಸರ್ವೇ ಸಾಮಾನ್ಯದಂತೆ ಆಗಿಬಿಟ್ಟಿದೆ.. ಅದರಲ್ಲೂ ಶಾಲೆಯ ಗುಂಡಿನ ದಾಳಿಗಳು ಅಮೆರಿಕದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಕಳೆದ ಮೇ ತಿಂಗಳಲ್ಲಿ ಟೆಕ್ಸಾಸ್‍ನ ಉವಾಲ್ಡೆಯಲ್ಲಿ 18 ವರ್ಷದಾತ ಗುಂಡುಹಾರಿಸಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನ ಹತ್ಯೆ ಮಾಡಿದ್ದ..
ಇದೀಗ 6 ವರ್ಷದ ಬಾಲಕನೋರ್ವ ಶಿಕ್ಷಕಿಗೆ ಗುಂಡಿಟ್ಟಿರುವ ಆಘಾತಕಾರಿ ಘಟನೆ ಪೂರ್ವ ಅಮೆರಿಕದ ವರ್ಜೀನಿಯಾ ರಾಜ್ಯದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ ಶಿಕ್ಷಕಿಗೆ ಗುಂಡು ತಗಲಿದ್ದು, ಶಿಕ್ಷಕಿಯ ಸ್ಥಿತಿ ಗಂಭೀರವಾಗಿದೆ. ಜೊತೆಗೆ ತರಗತಿಯಲ್ಲಿದ್ದ ಯಾವುದೇ ವಿದ್ಯಾರ್ಥಿಗಳಿಗೂ ತೊಂದರೆ ಆಗಿಲ್ಲ.
ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅಷ್ಟೇ ಅಲ್ಲ ಇದು ಆಕಸ್ಮಿಕವಾಗಿ ನಡೆಸಿದ ಗುಂಡಿನ ದಾಳಿಯಲ್ಲ ಎಂದೂ ಕೂಡ ತಿಳಿಸಿದರು.
ಶಾಲೆಯ ಪ್ರಾಂಶುಪಾಲರು ಮಾತನಾಡಿ, ವಿದ್ಯಾರ್ಥಿಗಳಿಗೆ ಬಂದೂಕುಗಳು ಲಭ್ಯವಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
Boy Shoots Teacher , incident took place in us school








