ಒಳ ಮೀಸಲಾತಿ ವಿರೋಧಿಸಿ ವಿಜಯನಗರ ಜಿಲ್ಲೆಯ ದೊಡ್ಡ ಹಾರಕನಾಳು ತಾಂಡಾದಲ್ಲಿನ ಜನರು ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಹಾರಕನನಾಳು ತಾಂಡಾದಲ್ಲಿನ ಜನರೇ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂಡಾಕ್ಕೆ ಅಧಿಕಾರಿಗಳ ತಂಡ ದೌಡಾಯಿಸಿದೆ. ಹರಪನಹಳ್ಳಿ ತಹಸೀಲ್ದಾರ್ ಡಾ. ಶಿವಕುಮಾರ್ ಬಿರಾದಾರ್, ಇಒ ಪ್ರಕಾಶ್ ನಾಯ್ಕ್, ಪಿಎಸ್ ಐ ಶಾಂತಮೂರ್ತಿ ತಾಂಡಾಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸವು ಕಾರ್ಯ ಮಾಡಿದ್ದಾರೆ.
ಪ್ರತಿಯೊಬ್ಬರು ಮತದಾನ ಮಾಡಬೇಕು. ಯಾರೂ ಮತದಾನದಿಂದ ದೂರ ಉಳಿಯಬಾರದು. ಹೀಗಾಗಿ ಮತದಾನ ಬಹಿಷ್ಕಾರ ಮಾಡಬೇಕಿಡ. ರಾಜಕೀಯ ಇಷ್ಟ ಇಲ್ಲ ಎಂದರೆ ನೋಟಾ ಬಟನ್ ಬೇಕಾದರೆ ಒತ್ತಿ ಎಂದು ಮನವಿ ಮಾಡಿದ್ದಾರೆ. ಒಳ ಮೀಸಲಾತಿ ಹಿಂಪಡೆದರೆ ಮಾತ್ರ ಮತ ಹಾಕುತ್ತೇವೆ ಎಂದು ತಾಂಡಾದ ಜನರು ಒತ್ತಾಯಿಸಿದ್ದಾರೆ.








