Tumkur | ಪ್ರಿಯಕರ ಸಾವು.. ಯುವತಿ ವಿಷ ಸೇವಿಸಿ ಆತ್ಮಹತ್ಯೆ

1 min read

Tumkur | ಪ್ರಿಯಕರ ಸಾವು.. ಯುವತಿ ವಿಷ ಸೇವಿಸಿ ಆತ್ಮಹತ್ಯೆ

ತುಮಕೂರು : ಅಪಘಾತದಲ್ಲಿ ಪ್ರಿಯಕರ ಸಾವನ್ನಪ್ಪಿದ್ದು, ಇದರಿಂದ ಮನನೊಂದಿದ್ದ ಯುವತಿ ವಿಷ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಅರೆಹಳ್ಳಿ ಗ್ರಾಮದ 22 ವರ್ಷದ ಸುಷ್ಮಾ ಮತ್ತು 23 ವರ್ಷದ ಮಸ್ಕಲ್ ಗ್ರಾಮದ ಧನುಷ್ ಮೃತರಾಗಿದ್ದಾರೆ.

ಈ ಇಬ್ಬರೂ ಕಳೆದ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ನಡೆಸುತ್ತಿದ್ದ ಧನುಷ್, ಯುವತಿ ಸುಷ್ಮಾ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಲು ತಯಾರಿ ನಡೆಸಿದ್ದರು.

ಆದ್ರೆ ಮೇ 11 ರಂದು ನೆಲಮಂಗಲದ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಧನುಷ್ ಮೃತಪಟ್ಟಿದ್ದರು.

boyfriend dead in accident: woman suicide in tumakuru saaksha tv
boyfriend dead in accident: woman suicide in tumakuru saaksha tv

ಇದರಿಂದ ಸುಷ್ಮಾ ತೀವ್ರವಾಗಿ ನೊಂದಿದ್ದರು. ಅಲ್ಲದೇ ಯುವಕನ ಶವಸಂಸ್ಕಾರದಲ್ಲಿಯೂ ಭಾಗಿಯಾಗಿದ್ದಳು.

ಶವಸಂಸ್ಕಾರ ಮುಗಿಸಿಕೊಂಡು ಬಂದ ಸುಷ್ಮಾ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದರು.

ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಹೋಗಿದ್ದಾರೆ.

ಈ ವೇಳೆ  ಸುಷ್ಮಾ ದಾರಿಯ ಮಧ್ಯೆದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

boyfriend dead in accident: woman suicide in tumakuru

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd