BPL ಕಾರ್ಡ್ ಹೊಂದಿರುವ ಸರ್ಕಾರಿ ಸೌಕರರಿಗೆ ಬಿಗ್ ಶಾಕ್ – ಅನರ್ಹರ ಪಟ್ಟಿ ಗುರುತಿಸಲು ಅಭಿಯಾನ ಶುರು..!
ಬಡವರಿಗೆ ಆಹಾರ ಪದಾರ್ಥಗಳನ್ನ ನೀಡುವ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೆಲ ಅವ್ಯವಸ್ಥೆಯಿದೆ.
ಸರಿಯಾಗಿ ಇದರ ಫಲ ಬಡವರಿಗೆ ಸಿಗುತ್ತಿಲ್ಲ. ಬದಲಾಗಿ ಶ್ರೀಮಂತರು ಸರ್ಕಾರಿ ನೌಕಕರು ಇದರ ಪ್ರಯೋಜನಗಳನ್ನ ಪಡೆದುಕೊಳ್ತಿದ್ದಾರೆ.
ಹೀಗಾಗಿ ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಆಗಾಗ ನಾನಾ ಕ್ರಮಗಳನ್ನ ಕೈಗೊಳ್ಳುತ್ತಿರುತ್ತದೆ.
ಇದೀಗ ಸುಳ್ಳು ದಾಖಲೆ ನೀಡಿ ಪಡಿತರ ಚೀಟಿ ಪಡೆದಿದ್ದ ಸರ್ಕಾರಿ ನೌಕರರಿಗೆ ಆಹಾರರ ಲಾಖೆಯು ಬಿಗ್ ಶಾಕ್ ನೀಡಲು ಮುಂದಾಗಿದೆ. ಹೌದು ಆಹಾರ ಇಲಾಖೆಯು ಇದೀಗ ಡಿಜಿಟಲ್ ಹೋರಾಟಕ್ಕೆ ಮುಂದಾಗಿದೆ.
ಆಧಾರ್ ಕಾರ್ಡ್ ಲಿಂಕ್ ಆಗಿರುವುದರ ಆಧಾರದ ಮೇಲೆ ಅನರ್ಹರ ಪಟ್ಟಿ ಗುರುತಿಸಲು ಅಭಿಯಾನ ಶುರುವಾಗಿದೆ.
ಬಿಪಿಎಲ್ ಕಾರ್ಡ್ ಸೌಲಭ್ಯಕ್ಕೆ ಅನರ್ಹರೆಂದು ಗುರುತಿಸಿದವರ ಕಾರ್ಡ್ ಗಳನ್ನ APL ಆಗಿ ಮಾರ್ಪಾಡು ಮಾಡಲು ಆಹಾರ ಇಲಾಖೆ ಮುಂದಾಗಿದೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದರ ಆಧಾರದ ಮೇಲೆ ಆರ್ ಟಿಒ ಸರ್ಕಾರಿ ಇಲಾಖೆಯ ಮುಖ್ಯಸ್ಥರುಗಳಿಂದ ಮಾಹಿತಿ ಪಡೆದು ಕಾರ್ಡ್ ದಾರರಿಗೆ ಗೊತ್ತಾಗದಂತೆ ಅನರ್ಹ ಕಾರ್ಡ್ ಗಳ ಪಟ್ಟಿ ಸಿಗಲಿದೆ.
ಇದರ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಕಾರ್ಡ್ ಆಗಿ ಬದಲಾವಣೆ ಮಾಡಲು ಮುಂದಾಗಿದೆ.
ಅನರ್ಹರರು (ಸರ್ಕಾರಿ ನೌಕರರು ) ಬಿಪಿಎಲ್ ಕಾರ್ಡ್ ಹೊಂದಿದಿದ್ದರೆ ಹಿಂದಿರುಗಿಸಿ ಎಂದು ಆಹಾರ ಇಲಾಖೆ ಮನವಿ ಮಾಡಿದೆ. ಕಾರ್ಡ್ ಹಿಂದಿರುಗಿಸದಿದ್ದರೆ ಇಲಾಖೆ ಗುರುತಿಸಿ ರದ್ದು ಮಾಡಲಾಗುತ್ತದೆ.
ಜೊತೆಗೆ ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾಗಲಿದೆ. ಬಿಪಿಎಲ್ ಕಾರ್ಡ್ ನಿಂದ ಎಷ್ಟು ವರ್ಷಗಳಿಂದ ರೇಷನ್ ಪಡೆದಿದ್ದಾರೋ ಅಷ್ಟೂ ವರ್ಷಗಳ ಆಹಾರ ಸಾಮಾಗ್ರಿಯ ಮೌಲ್ಯದ ದಂಡ ಕಟ್ಟಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದೆ.
`ಉಗ್ರ ಸರ್ಕಾರದ ಉಗ್ರ ಶಿಕ್ಷೆ’ಯ ಪಟ್ಟಿ ಬಿಡುಗಡೆ