ಮಡಿಕೇರಿ: ಕೊಡಗಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಭೂಕುಸಿತ ಮತ್ತು ಪ್ರಧಾನ ಅರ್ಚಕ ನಾರಾಯಣಾಚಾರ್ ಕುಟುಂಬ ಸೇರಿದಂತೆ ಐವರ ಭೂಸಮಾಧಿ ಕುರಿತ ವರದಿ ರಾಜ್ಯ ಸರ್ಕಾರದ ಕೈಸೇರಿದೆ.
ಜಿಲಾಜಿಕಲ್ ಸರ್ವೆ ಆಫ್ ಇಂಡಿಯಾ ತಯಾರಿಸಿರುವ 16 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಳೆದ ಆಗಸ್ಟ್ 5ರ ಸುರಿದ ರಾತ್ರಿ ಭಾರಿ ಮಳೆಗೆ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಬೆಟ್ಟ ಕುಸಿದ ಪರಿಣಾಮ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಾಣಾಚಾರ್ ಸೇರಿ ಅವರ ಮನೆ ಮಣ್ಣಿನಲ್ಲಿ ಕೊಚ್ಚಿ ಹೋಗಿತ್ತು. ಮನೆಯಲ್ಲಿದ್ದ ನಾರಾಯಣಾಚಾರ್, ಅವರ ಪತ್ನಿ, ಸಹೋದರ, ಇಬ್ಬರು ಕಿರಿಯ ಅರ್ಚಕರು ಸೇರಿದಂತೆ ಐವರು ನಾಪತ್ತೆಯಾಗಿದ್ದರು. ಸತತ 20 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ನಾರಾಯಣಾಚಾರ್, ಸಹೋದರನ ಶವ ಮಾತ್ರ ಪತ್ತೆಯಾಗಿತ್ತು. ಉಳಿದಂತೆ ಮೂವರ ಶವ ಪತ್ತೆಯಾಗದ ಕಾರಣ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು.
ಬ್ರಹ್ಮಗಿರಿ ಬೆಟ್ಟ ಕುಸಿದ ಘಟನೆ ಬಳಿಕ ಆಗಸ್ಟ್ 16, 17ಕ್ಕೆ ಜಿಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಭೇಟಿ ನೀಡಿ ಘಟನೆಯ ಕಾರಣಗಳ ಬಗ್ಗೆ ಸಂಶೋಧನೆ ನಡೆಸಿದ್ದರು. ಈ ದುರಂತಕ್ಕೆ ಮಾನವ ಅಭಿವೃದ್ದಿ ಕೆಲಸಗಳು ಮೂಲಕಾರಣವಾಗಿದ್ದು, ಅದರಲ್ಲೂ ಇಂಗುಗುಂಡಿ ನಿರ್ಮಾಣ, ರಸ್ತೆ ನಿರ್ಮಾಣ ಮೂಲ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.
2017ರಲ್ಲೇ ತಲಕಾವೇರಿ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದ್ದು ಭೂಕುಸಿತದ ಬಗ್ಗೆ ಮುನ್ಸೂಚನೆ ಇತ್ತು ಎಂದು ವರದಿ ಸಲ್ಲಿಕೆಯಾಗಿದೆ. ಆದರೆ ಈ ವರದಿಯನ್ನು ಪ್ರಶ್ನಿಸಿ ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel