Brahmasthra : ಟ್ರೇಲರ್ ನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದು ಎಲ್ಲಿ..??

1 min read

ಬಹುನಿರೀಕ್ಷೆಯ ಬಾಲಿವುಡ್ ಸಿನಿಮಾ ( ಪ್ಯಾನ್ ಇಂಡಿಯನ್ ) ಬ್ರಹ್ಮಾಸ್ತ್ರದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ..  ಣಬೀರ್ ಕಪೂರ್ ಮತ್ತು ಅಲಿಯಾ ಭಟ್  ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಸ್ಟಾರ್ ಗಳ ಬಳಗವೇ ಇದೆ.., ಅಮಿತಾಬ್ ಬಚ್ಚನ್ , ಟಾಲಿವುಡ್ ನ ಸ್ಟಾರ್ ನಟ ನಾಗಾರ್ಜುನ್ , ಮೌನಿ ರಾಯ್ ನಂತಹ ತಾರೆಗಳಿದ್ದಾರೆ..

ಈ ಸಿನಿಮಾ 5 ಭಾಷೆಗಳಲ್ಲಿ ಬರ್ತಿದ್ದು ಟ್ರೇಲರ್ ಬಾಲಿವುಡ್ ಪಾಲಿಗೆ ಭರವಸೆಯ ಬೆಳಕಾಗಿ ನಿಂತಿದೆ.. ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ಬಾಲಿವುಡ್ ಪಾಲಿಗೆ ಈ ಸಿನಿಮಾ ವರದಾನವಾಗು ನಿರೀಕ್ಷೆಯಿದೆ..  ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿರುವ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಟ್ರೇಲರ್ ನಲ್ಲಿ ರಣಬೀರ್ ಖುದ್ದು ಅಗ್ನಿಯಾಸ್ತ್ರ ಎನ್ನುವ ದೃಶ್ಯ ಮೈ ನವಿರೇಳಿಸಿದರೆ , ಮೌನಿ ರಾಯ್ , ನಾಗಾರ್ಜುನ್ ಲುಕ್ ಬೆಚ್ಚಿಸುತ್ತೆ..

ಸೂಪೊರ್ ನ್ಯಾಚುರಲ್ , ಥ್ರಿಲ್ಲರ್ , ಫ್ಯಾಂಟಸಿ ಸಿನಿಮಾವಿದು.. ಟ್ರೇಲರ್ ಸೂಪರ್ ಆಗಿದೆ.. ಆದ್ರೆ ಸಿನಿಮಾ ತಂಡದಿಂದ ಒಂದು ಎಡವಟ್ಟಾಗಿಬಿಟ್ಟಿದೆ..

ಈ ಟ್ರೇಲರ್ ನಲ್ಲಿ ಒಂದು ದೃಶ್ಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರಂತೂ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ..

ಟ್ರೈಲರ್ ನಲ್ಲಿ ರಣಬೀರ್ ಕಪೂರ್ ಸ್ಪೀಡ್ ಆಗಿ ಬಂದು ದೇವಸ್ಥಾನದ ಒಳಗೆ ನುಗ್ಗುತ್ತಾರೆ. ಅಲ್ಲಿರುವ ಘಂಟೆ ಬಾರಿಸುತ್ತಾರೆ. ಜಿಗಿದು ಗಂಟೆ ಬಾರಿಸುವಾಗ, ಅವರು ಧರಿಸಿರುವ ಶೂ ಕಾಣುತ್ತದೆ. ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಶೂ ಇರುವ ಕಾಲುಗಳ ಫೋಟೋಗಳು ವೈರಲ್ ಆಗಿವೆ.. ಈ ರೀತಿ  ದೇವರಿಗೆ ಅಪಮಾನ ಮಾಡಿದ್ದಕ್ಕೆ ನೆಟ್ಟಿಗರು ಕೆಂಡ ಕಾಟರುತ್ತಿದ್ದಾರೆ..

 

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd