ಬ್ರೆಡ್ ಆಲೂ ಟಿಕ್ಕಿ ಮಾಡುವ ವಿಧಾನ
ಬೇಕಾದ ಸಾಮಗ್ರಿಗಳು:
1. ಆಲೂಗಡ್ಡೆ – 4 (ಮಧ್ಯಮ ಗಾತ್ರ)
2. ಬ್ರೆಡ್ ಸ್ಲೈಸ್ – 3
3. ಕಾರ್ನ್ ಫ್ಲೋರ್ – 2-3 ಟೇಬಲ್ ಸ್ಪೂನ್
4. ಜೀರಿಗೆ ಪುಡಿ – 1 ಟೀಸ್ಪೂನ್
5. ಮೆಣಸಿನ ಪುಡಿ – 1 ಟೀಸ್ಪೂನ್
6. ಹಸಿಮೆಣಸು (ಚಿಕ್ಕದಾಗಿ ಕತ್ತರಿಸಿದ್ದು) – 2
7. ಉಪ್ಪು – ರುಚಿಗೆ ತಕ್ಕಷ್ಟು
8. ಬ್ರೆಡ್ ಪುಡಿ (ಬ್ರೆಡ್ ಕ್ರಮ್ಸ್) – ಅಗತ್ಯವಿರುವಷ್ಟು
9. ಎಣ್ಣೆ – ಫ್ರೈ ಮಾಡಲು
ಮಾಡುವ ವಿಧಾನ:
1: ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ತುರಿಯಿರಿ
2. 3 ಬ್ರೆಡ್ ಸ್ಲೈಸನ್ನು ನೀರಿನಲ್ಲಿ ಒದ್ದೆ ಮಾಡಿ, ಎಕ್ಸ್‌ಟ್ರಾ ನೀರನ್ನು ಹಿಂಡಿ ತೆಗೆದುಹಾಕಿ.
3: ಒಂದು ದೊಡ್ಡ ಪಾತ್ರೆಯಲ್ಲಿ ತುರಿದ ಆಲೂ, ಒದ್ದೆ ಮಾಡಿದ ಬ್ರೆಡ್, ಉಪ್ಪು, ಕಾರ್ನ್ ಫ್ಲೋರ್, ಮೆಣಸಿನ ಪುಡಿ, ಹಸಿಮೆಣಸಿನ ಚೂರುಗಳು, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
4: ಕೈಗೆ ಎಣ್ಣೆ ಹಚ್ಚಿ, ಮಿಶ್ರಣವನ್ನು ಬೇಕಾದ ಆಕಾರದಲ್ಲಿ, ಟಿಕ್ಕಿಯಂತೆ ಸಿದ್ಧಪಡಿಸಿ.
ಸಿದ್ಧವಾದ ಟಿಕ್ಕಿಗಳನ್ನು ಬ್ರೆಡ್ ಪುಡಿಯಲ್ಲಿ ರೋಲ್ ಮಾಡಿ.
5: ಟಿಕ್ಕಿಗಳನ್ನು ಫ್ರಿಡ್ಜ್‌ನಲ್ಲಿ 2 ಗಂಟೆಗಳವರೆಗೆ ಇಡಿ,
6: ಕಾದ ಎಣ್ಣೆಯಲ್ಲಿ ಟಿಕ್ಕಿಗಳನ್ನು ಫ್ರೈ ಮಾಡಿ, ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
ಗಮನಿಸಿ:
ಈ ಬ್ರೆಡ್ ಆಲೂ ಟಿಕ್ಕಿಗಳನ್ನು ಚಟ್ನಿ ಅಥವಾ ಟೊಮ್ಯಾಟೊ ಸಾಸ್ ಜೊತೆ ಸವಿಯಬಹುದು.








