ಹೆಣ್ಣು ಮಗುವಿಗೆ ತಂದೆಯಾದ ಧ್ರುವಾ ಸರ್ಜಾ….
ಸ್ಯಾಂಡಲ್‌ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನವರಾತ್ರಿಯ ಶುಭ ಸಂದರ್ಭದಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ತಾನು ತಂದೆಯಾಗದಿರುವ ಖುಷಿ ಸುದ್ದಿಯನ್ನ ಧ್ರುವಾ ಸರ್ಜಾ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ಪತ್ನಿ ಪ್ರೇರಣಾ ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬನಶಂಕರಿಯ ಅಕ್ಷ ಆಸ್ಪತ್ರೆಯಲ್ಲಿ ಮಗು ಜನನವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಈ ಶುಭ ಸುದ್ದಿಯನ್ನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಧ್ರುವ ಸರ್ಜಾ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರ ಆಸೆಯಂತೆ ಪುಟ್ಟ ಮಗಳ ಎಂಟ್ರಿಯಾಗಿದೆ.
ಕೆಲದಿನಗಳ ಹಿಂದೆಯಷ್ಟೆ ಪ್ರೇರಣ ಸೀಮಂತ ಶಾಸ್ತ್ರ ಆಚರಿಸಲಾಗಿತ್ತು. ಇದರ ಮತ್ತು ಬೇಬಿ ಬಂಪ್ ಪೊಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.
ಇನ್ನೂ ಧ್ರುವಾ ಸರ್ಜಾ ಸಿನಿಮಾ ಬಗ್ಗೆ ಮಾತನಾಡುವುದಾದರೆ ಧ್ರುವಾ ಸದ್ಯ ಮಾರ್ಟೀನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Breaking News: Dhruva Sarja becomes father to baby girl