ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ (Bengaluru) ಭಾರೀ ಮಳೆ (Rain) ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಪ್ರತಿ ಬಾರಿಯಂತೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತಿದ್ದ ಬಿಬಿಎಂಪಿ ಹಾಗೂ ಸರ್ಕಾರ ಈ ಬಾರಿಯೂ ಅದೇ ರೀತಿ ಹೇಳಿಕೆ ನೀಡಿದ್ದು, ಜನರು ಮಾತ್ರ ಮಳೆಯಿಂದಾಗಿ ಕಷ್ಟು ಪಡುವಂತಾಗಿದೆ.
ರಿಂಗ್ ರೋಡ್ ನ ಪಿಎಸ್ ಕಾಲೇಜ್ ಬಳಿಯ ವೀರಭದ್ರನಗರ (Veerabhadreshwara Nagar)ದ ಸ್ಲಮ್‌ನಲ್ಲಿ 5 ಮನೆಗಳು ಮತ್ತು ಕಾಂಪೌಂಡ್ ಗೋಡೆ ಕುಸಿದು ಇವುಗಳ ಪಕ್ಕದ ಅಪಾರ್ಟ್ ಮೆಂಟ್ (Apartment)ನಲ್ಲಿ ನಿಲ್ಲಿಸಿದ್ದ ನಿಲ್ಲಿಸಿದ್ದ ಕಾರುಗಳು ಸಂಪೂರ್ಣವಾಗಿ ಹಾನಿಯಾಗಿವೆ.
ವಸುಂಧರಾ ಕೃತಿಕಾ ಅಪಾರ್ಟ್ಮೆಂಟ್‌ನ ತಡೆಗೋಡೆ ಸಮೇತ ಮನೆ ಸಂಪೂರ್ಣ ನೆಲಸಮವಾಗಿದೆ. ಹೀಗಾಗಿ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳಿಗೆ ಹಾನಿಯಾಗಿದೆ. ಅಲ್ಲದೇ, ಘಟನೆಯಲ್ಲಿ ಗೋಪಾಲ್ ಎಂಬುವವರ ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು ನೆಲಸಮಗೊಂಡಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.








