ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಬ್ಯಾಟ್ಸ್ ಮೆನ್ ಯಾರು..?
ದುಬೈ : ಐಸಿಸಿ ಟಿ-20 ವಿಶ್ವಕಪ್ ಸಂಗ್ರಾಮದಲ್ಲಿ ಅಕ್ಟೋಬರ್ 24 ರಿಂದ ಅಸಲಿಯಾಟ ಶುರುವಾಗಲಿದೆ.
ಇಷ್ಟು ದಿನ ವಾರ್ಮ್ ಅಪ್ ಮ್ಯಾಚ್.. ಅರ್ಹತಾ ಸುತ್ತಿನ ಪಂದ್ಯ ಎಂದು ಟ್ರೈಲರ್ ನೋಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಕ್ಟೋಬರ್ 24 ರಿಂದ ಆರಂಭವಾಗುವ ಕ್ರಿಕೆಟ್ ಮದಗಜಗಳ ಕಾಳಗ ಅಸಲಿ ಕಿಕ್ ನೀಡಲಿದೆ.
ಈ ಬಾರಿ ಟಿ-20 ವಿಶ್ವಕಪ್ ಬಗ್ಗೆ ಈಗಾಗಲೇ ಕ್ರಿಕೆಟ್ ದಿಗ್ಗಜರು ತನ್ನ ಅಭಿಪ್ರಾಯವನ್ನ ಬಹಿರಂಗ ಪಡಿಸಿ ತಮ್ಮ ನೆಚ್ಚಿನ ತಂಡವನ್ನು ಹೇಳಿದ್ದಾರೆ. ಹಾಗೇ ಯಾವ ಆಟಗಾರನ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಕೂಡ ತಿಳಿಸಿದ್ದಾರೆ.
ಅದರಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ವಿಶ್ವಕಪ್ ಬಗ್ಗೆ ಮಾತನಾಡಿದ್ದು, ಟಿ-20 ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ ಆಟಗಾರರೇ ಹೆಚ್ಚು ರನ್ ಮತ್ತು ವಿಕೆಟ್ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೆ ಟೀಂ ಇಂಡಿಯಾದ ರಾಕಿಂಗ್ ಸ್ಟಾರ್ ಕನ್ನಡಿಗ ಕೆ.ಎಲ್. ರಾಹುಲ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಬಹುದು.
ಜತೆಗೆ, ವೇಗಿ ಮೊಹಮ್ಮದ್ ಶಮಿ ಅವರು ಹೆಚ್ಚು ವಿಕೆಟ್ ಪಡೆಯಲಿದ್ದಾರೆ. ಇದರಿಂದಾಗಿ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ’ ಎಂದು ಹೇಳಿದ್ದಾರೆ.