ನವದೆಹಲಿ : ತಮಿಳುನಾಡಿನ ದೇವಸ್ಥಾನದಲ್ಲಿ ಕಳವು ಮಾಡಲಾಗಿದ್ದ ರಾಮ, ಸೀತಾ, ಲಕ್ಷ್ಮಣ ವಿಗ್ರಹಗಳನ್ನು ಬ್ರಿಟನ್ ಅಧಿಕಾರಿಗಳು ಭಾರತಕ್ಕೆ ಹಿಂದುರುಗಿಸಿದ್ದಾರೆ. ಈ ವಿಗ್ರಹಗಳು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದು ಎನ್ನಲಾಗಿದೆ.
ಬ್ರಿಟನ್ ಅಧಿಕಾರಿಗಳು ವಿಗ್ರಹಗಳನ್ನು ಹಿಂದುರಿಗಿಸಿದ ಬಗ್ಗೆ ಕೇಂದ್ರ ಸಂಸ್ಕøತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ವಿಗ್ರಹಗಳನ್ನು 1978ರಲ್ಲಿ ತಮಿಳುನಾಡಿನ ದೇವಾಲಯವೊಂದರಿಂದ ಕಳವು ಮಾಡಲಾಗಿತ್ತು. ಈ ವಿಗ್ರಹಗಳು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದಿಂದ ಬಂದಿದೆ. ಇವುಗಳನ್ನು ಯುನೈಟೆಡ್ ಕಿಂಗ್ ಡಮ್ ಅಧಿಕಾರಿಗಳು ವಿಗ್ರಹಗಳನ್ನು ಹಿಂದಿರುಗಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿಗೆ ಯುಕೆ ಅಧಿಕಾರಿಗಳು ಇದೇ ರೀತಿಯ ಎರಡು ವಿಗ್ರಹಗಳು ಮತ್ತು ಒಂದು ಸ್ತಂಭವನ್ನು ಹಸ್ತಾಂತರಿಸಿದ್ದರು ಎಂದು ಪಟೇಲ್ ಮಾಹಿತಿ ನೀಡಿದ್ದಾರೆ.