60 ರಾಷ್ಟ್ರಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ
ಬ್ರಿಟನ್ ನಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗ್ತಲೇ ಇರೋ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಂದು ಆಘಾತಕಾರಿ ವಿಚಾರವನ್ನ ಬಹಿರಂಗಪಡಿಸಿದೆ. ಹೌದು ಬ್ರಿಟನ್ ಕೊರೊನಾ ವೈರಸ್ ಈಗ ಜಗತ್ತಿನ ಕನಿಷ್ಠ 60 ರಾಷ್ಟ್ರಗಳಲ್ಲಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೆಳದ ಒಂದು ವಾರದಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿರುವ ರಾಷ್ಟ್ರಗಳ ಪಟ್ಟಿಗೆ 10 ದೇಶಗಳು ಸೇರ್ಪಡೆಯಾಗಿವೆ.
ಭಾರತದಲ್ಲಿ ಒಂದೇ ದಿನ ಪತ್ತೆಯಾದ ಹೊಸ ಕೊರೊನಾ ಕೇಸ್ ಗಳೆಷ್ಟು, ಸಾವಿನ ಸಂಖ್ಯೆ ಎಷ್ಟು..!
ಜಗತ್ತಿನಾದ್ಯಂತ ಕೋವಿಡ್ನಿಂದಾಗಿ 20 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾಕಷ್ಟು ಲಸಿಕೆ ಲಭ್ಯವಾಗುವವರೆಗೂ ಹೊಸ ಸ್ವರೂಪದ ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯುವುದು ಹೇಗೆ ಎಂದು ವಿಶ್ವದಾದ್ಯಂತ ತಲ್ಲಣ ಸೃಷ್ಟಿಯಾಗಿದೆ. ಬ್ರಿಟನ್ ರೀತಿಯೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡ ವೈರಸ್, ಅತಿ ವೇಗವಾಗಿ ಹರಡಬಲ್ಲದಾಗಿದೆ. ಆ ವೈರಸ್ 23 ರಾಷ್ಟ್ರಗಳಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
Vedio : ಮೈನವಿರೇಳಿಸುತ್ತೆ ಹುಲಿಗಳ ನಡುವಿನ ಕಾಳಗ..!
ಆನ್ ಲೈನ್ ಗೇಮ್ಸ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ ಟೆಕ್ಕಿ ಮಾಡಿದ್ದೇನ್ ನೋಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel