ಕೋಲಾರ: ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸೆಕ್ಯೂರಿಟಿ ಗಾರ್ಡ್ ಕೊಲೆಯಾಗಿರುವ ವ್ಯಕ್ತಿ. ಈ ಘಟನೆ ಮುಳಬಾಗಿಲಿನ (Mulabagilu ) ಮಿಣಜೇನಹಳ್ಳಿಯಲ್ಲಿ ನಡೆದಿದೆ. 48 ವರ್ಷದ ಮಂಜುನಾಥ್ ಕೊಲೆಯಾಗಿರುವ ವ್ಯಕ್ತಿ. ಮೊದಲ ಪತ್ನಿಯು, ಎರಡನೇ ಪತ್ನಿಯ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಹತ್ಯೆಯಾಗಿರುವ ಮಂಜುನಾಥ್ ಮೊದಲ ಪತ್ನಿ ತೊರೆದು ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಕೊಲೆಯಾಗಿರುವ ಬಂಗಾರಪೇಟೆಯ ಮಾದಮುತ್ತನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನೊಂದಿಗೆ ಹಣದ ವಿಚಾರವಾಗಿ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.