ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: ‘ಬಿಎಸ್‌ಎ ಗೋಲ್ಡ್ ಸ್ಟಾರ್ 650’ಯ 2 ಹೊಸ ಎಡಿಷನ್‌ಗಳು ಬಿಡುಗಡೆ! ದರ ಎಷ್ಟು?

admin by admin
October 26, 2026
in National, Newsbeat, ದೇಶ - ವಿದೇಶ
bsa-gold-star-650-new-editions-price-brooklands-black-birmingham-blue-india

bsa-gold-star-650-new-editions-price-brooklands-black-birmingham-blue-india

Share on FacebookShare on TwitterShare on WhatsappShare on Telegram

ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: ‘ಬಿಎಸ್‌ಎ ಗೋಲ್ಡ್ ಸ್ಟಾರ್ 650’ಯ 2 ಹೊಸ ಎಡಿಷನ್‌ಗಳು ಬಿಡುಗಡೆ! ದರ ಎಷ್ಟು?

ಬೆಂಗಳೂರು: ಹಬ್ಬದ ಸೀಸನ್ ಸಂಭ್ರಮವನ್ನು ಹೆಚ್ಚಿಸಲು ಬಿಎಸ್‌ಎ ಮೋಟಾರ್‌ಸೈಕಲ್ಸ್ ಭಾರತದಲ್ಲಿ ತನ್ನ ಪ್ರಸಿದ್ಧ ‘ಗೋಲ್ಡ್ ಸ್ಟಾರ್ 650’ ಬೈಕ್‌ನ ಎರಡು ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಎಂಸಿಎನ್‌ನ ‘ಬೆಸ್ಟ್ ರೆಟ್ರೊ ಬೈಕ್’ ಪ್ರಶಸ್ತಿ ವಿಜೇತ ಈ ಬೈಕ್ ಇದೀಗ ‘ಬ್ರೂಕ್‌ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಡಿಷನ್’ ಮತ್ತು ‘ಬರ್ಮಿಂಗ್ಹ್ಯಾಮ್ ಬ್ಲೂ ಎಡಿಷನ್’ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Related posts

swiggy-multi-restaurant-ordering-feature-five-restaurants

ಒಂದೇ ಬಾರಿಗೆ 5 ಹೋಟೆಲ್‌ಗಳಿಂದ ಊಟ, ಸ್ವಿಗ್ಗಿಯಲ್ಲಿ ಬಂತು ಮಲ್ಟಿ ರೆಸ್ಟೋರೆಂಟ್ ಆರ್ಡರಿಂಗ್! ಏನಿದು ಹೊಸ ಫೀಚರ್?

October 26, 2026
yezdi-trinity-2026-bikes-online-booking-amazon-flipkart

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಅಮೆಜಾನ್, ಫ್ಲಿಪ್‌ಕಾರ್ಟ್‌ಗೂ ಬಂತು ‘ಯೆಜ್ಡಿ ಟ್ರಿನಿಟಿ’; ಬುಕ್‌ ಮಾಡುವುದು ಹೇಗೆ?

October 26, 2026

ಬಿಎಸ್‌ಎ ಬ್ರ್ಯಾಂಡ್‌ನ ಐತಿಹಾಸಿಕ ಮೈಲಿಗಲ್ಲುಗಳನ್ನು ಆಚರಿಸುವ ಉದ್ದೇಶದಿಂದ ಈ ಎರಡು ಹೊಸ ಎಡಿಷನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಲುಕ್ ಹೊಂದಿರುವ ಈ ಬೈಕ್‌ಗಳು ಬಿಎಸ್‌ಎ ಮರುಹುಟ್ಟಿನ ಪ್ರಮುಖ ಆಕರ್ಷಣೆಯಾಗಿವೆ.

ಇದರಲ್ಲಿ ‘ಬ್ರೂಕ್‌ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಡಿಷನ್’ ಬ್ರಿಟನ್‌ನ ಐತಿಹಾಸಿಕ ಬ್ರೂಕ್‌ಲ್ಯಾಂಡ್ಸ್ ರೇಸ್ ಟ್ರ್ಯಾಕ್‌ನಿಂದ ಸ್ಫೂರ್ತಿ ಪಡೆದಿದೆ. 1937ರಲ್ಲಿ ವಾಲ್ ಹ್ಯಾಂಡ್ಲಿ ಎಂಬ ರೇಸರ್ ಇದೇ ಟ್ರ್ಯಾಕ್‌ನಲ್ಲಿ ತೋರಿದ ಅದ್ಭುತ ಸಾಧನೆಗಾಗಿ ‘ಗೋಲ್ಡ್ ಸ್ಟಾರ್’ ಬ್ಯಾಡ್ಜ್ ಪಡೆದಿದ್ದರು. ಆ ಐತಿಹಾಸಿಕ ಕ್ಷಣದ ನೆನಪಿಗಾಗಿ ಈ ಆವೃತ್ತಿಯನ್ನು ಹೊರತರಲಾಗಿದೆ. ಈ ಬೈಕ್ ಆಕರ್ಷಕವಾದ ಕಪ್ಪು ಬಣ್ಣ, ಕ್ರೋಮ್ ಫಿನಿಶ್ ಹೊಂದಿರುವ ಟ್ಯಾಂಕ್ ಮತ್ತು ಫೆಂಡರ್‌ಗಳ ಮೇಲೆ ಚಿನ್ನದ ಬಣ್ಣದ ಗೆರೆಗಳು ಹಾಗೂ ಪ್ರೀಮಿಯಂ ಕ್ವಿಲ್ಟೆಡ್ ಸೀಟ್ ಅನ್ನು ಹೊಂದಿದ್ದು ಅತ್ಯಂತ ಗಾಂಭೀರ್ಯದಿಂದ ಕೂಡಿದೆ.

ಮತ್ತೊಂದೆಡೆ, ‘ಬರ್ಮಿಂಗ್ಹ್ಯಾಮ್ ಬ್ಲೂ’ ಆವೃತ್ತಿಯು ಬಿಎಸ್‌ಎ ಬ್ರ್ಯಾಂಡ್ ಹುಟ್ಟಿದ ‘ಬರ್ಮಿಂಗ್ಹ್ಯಾಮ್’ ನಗರಕ್ಕೆ ಗೌರವ ಸಲ್ಲಿಸುತ್ತದೆ. ಬಿಎಸ್‌ಎ ಹುಟ್ಟಿನಿಂದ ಹಿಡಿದು ಜಗತ್ತಿನಾದ್ಯಂತ ಅದು ಬೆಳೆದ ಪರಿಯ ಹಿಂದೆ ಈ ನಗರದ ಪಾತ್ರ ದೊಡ್ಡದಿದೆ. ಈ ಬೈಕ್ ಗಾಢವಾದ ನೀಲಿ ಬಣ್ಣದ ಪೇಂಟ್, ವಿಶೇಷವಾದ ಬೆಳ್ಳಿಯ ಸೈಡ್-ಪ್ಯಾನಲ್ ಬ್ಯಾಡ್ಜ್ ಹಾಗೂ ವಿಶಿಷ್ಟವಾದ ಎಂಜಿನ್ ಫಿನಿಶ್ ಅನ್ನು ಹೊಂದಿದೆ. ಇದು ಗೋಲ್ಡ್ ಸ್ಟಾರ್‌ನ ಹಳೆಯ ಕ್ಲಾಸಿಕ್ ಡಿಎನ್‌ಎಯನ್ನು ಉಳಿಸಿಕೊಂಡು, ಇಂದಿನ ಯುವಜನತೆಗೆ ಒಪ್ಪುವಂತಹ ಸಮಕಾಲೀನ ಸ್ಪರ್ಶವನ್ನು ನೀಡಿದೆ.

ಈ ಎರಡೂ ಹೊಸ ಬೈಕ್‌ಗಳ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ಇವುಗಳು ಶಕ್ತಿಶಾಲಿ 652ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 45ಎಚ್‌ಪಿ ಪವರ್ ಹಾಗೂ 55ಎನ್‌ಎಂ ಟಾರ್ಕ್ ಉತ್ಪಾದಿಸುತ್ತವೆ.
ದೊಡ್ಡ ಸಿಂಗಲ್ ಸಿಲಿಂಡರ್ ನೀಡುವ ವಿಶಿಷ್ಟ ಅನುಭವವನ್ನು ಗ್ರಾಹಕರು ಇದರಲ್ಲಿ ಪಡೆಯಲಿದ್ದಾರೆ. ಸುರಕ್ಷತೆ ಹಾಗೂ ಅತ್ಯುತ್ತಮ ನಿಯಂತ್ರಣಕ್ಕಾಗಿ ಬ್ರೆಂಬೊ ಬ್ರೇಕ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಕ್ಲಾಸಿಕ್ ಲುಕ್ ನೀಡುವ ವೈರ್-ಸ್ಪೋಕ್ ವೀಲ್‌ಗಳನ್ನು ಈ ಬೈಕ್‌ನಲ್ಲಿ ಅಳವಡಿಸಲಾಗಿದೆ.

ಈ ಹೊಸ ಬಿಡುಗಡೆಯ ಬಗ್ಗೆ ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಒಂದು ಆಧುನಿಕ ರೆಟ್ರೊ-ರೋಡ್‌ಸ್ಟರ್ ಬೈಕ್ ಹೇಗಿರಬೇಕು ಎಂಬುದಕ್ಕೆ ಗೋಲ್ಡ್ ಸ್ಟಾರ್ ಅತ್ಯುತ್ತಮ ಉದಾಹರಣೆ. ಇದರ ಅಪ್ಪಟ ಬ್ರಿಟಿಷ್ ವಿನ್ಯಾಸದಿಂದ ಹಿಡಿದು ಎಂಜಿನ್ ನೀಡುವ ಅನುಭವದವರೆಗೆ ಪ್ರತಿಯೊಂದು ಅಂಶವೂ ಗೋಲ್ಡ್ ಸ್ಟಾರ್‌ನ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಬ್ರೂಕ್‌ಲ್ಯಾಂಡ್ಸ್ ಬ್ಲ್ಯಾಕ್ ಆವೃತ್ತಿಯು ಗೋಲ್ಡ್ ಸ್ಟಾರ್ ಹೆಸರು ಬಂದ ಐತಿಹಾಸಿಕ ಕ್ಷಣವನ್ನು ಗೌರವಿಸಿದರೆ, ಬರ್ಮಿಂಗ್ಹ್ಯಾಮ್ ಬ್ಲೂ ಆವೃತ್ತಿಯು ಇಂದಿನ ರೈಡರ್‌ಗಳಿಗೆ ತಕ್ಕಂತೆ ಆಧುನಿಕ ರೂಪವನ್ನು ನೀಡುತ್ತಿದೆ. ಇವೆರಡೂ ಸೇರಿ ಬಿಎಸ್‌ಎಯ ವಿಶಿಷ್ಟ ಇತಿಹಾಸವನ್ನು ಸಾರುತ್ತವೆ,” ಎಂದು ತಿಳಿಸಿದರು.

ಬೆಲೆ ಎಷ್ಟು?

ದೇಶಾದ್ಯಂತ ಇರುವ ಬಿಎಸ್‌ಎ ಡೀಲರ್‌ಶಿಪ್‌ಗಳಲ್ಲಿ ಈ ಎರಡು ಬಣ್ಣದ ಬೈಕ್‌ಗಳು ಲಭ್ಯವಿದ್ದು, ಬೆಲೆಗಳ ವಿವರ ಈ ಕೆಳಗಿನಂತಿದೆ:
* ಬರ್ಮಿಂಗ್ಹ್ಯಾಮ್ ಬ್ಲೂ: 3,55,950 ರೂ.
* ಬ್ರೂಕ್‌ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಡಿಷನ್: 3,64,950 ರೂ.

ಗ್ರಾಹಕರ ತೃಪ್ತಿ ಹಾಗೂ ಸುಗಮ ನಿರ್ವಹಣೆಗಾಗಿ ಬಿಎಸ್‌ಎ ಮೋಟಾರ್‌ಸೈಕಲ್ಸ್ ಉದ್ಯಮದಲ್ಲೇ ಮೊದಲ ಬಾರಿಗೆ ‘ಓನರ್‌ಶಿಪ್ ಅಶ್ಯೂರೆನ್ಸ್ ಪ್ರೋಗ್ರಾಂ’ ಅನ್ನು ಪರಿಚಯಿಸಿದೆ. ಇದು ಈ ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿದೆ:

* 4 ವರ್ಷ ಅಥವಾ 50,000 ಕಿ.ಮೀ ವರೆಗೆ ಸ್ಟ್ಯಾಂಡರ್ಡ್ ವಾರಂಟಿ.
* ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ.
* 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
* ದೇಶಾದ್ಯಂತ ಅನ್ವಯವಾಗುವಂತೆ 5 ವರ್ಷಗಳವರೆಗೆ ವಾರ್ಷಿಕ ನಿರ್ವಹಣಾ ಗುತ್ತಿಗೆ ಸೌಲಭ್ಯ.

ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಸೇಲ್ಸ್ ಮತ್ತು ಸರ್ವಿಸ್ ಕೇಂದ್ರಗಳಲ್ಲಿ ಸಮಗ್ರ ಮಾಲೀಕತ್ವದ ಪ್ರಯೋಜನಗಳು ಸಿಗಲಿವೆ.

ShareTweetSendShare
Join us on:

Related Posts

swiggy-multi-restaurant-ordering-feature-five-restaurants

ಒಂದೇ ಬಾರಿಗೆ 5 ಹೋಟೆಲ್‌ಗಳಿಂದ ಊಟ, ಸ್ವಿಗ್ಗಿಯಲ್ಲಿ ಬಂತು ಮಲ್ಟಿ ರೆಸ್ಟೋರೆಂಟ್ ಆರ್ಡರಿಂಗ್! ಏನಿದು ಹೊಸ ಫೀಚರ್?

by admin
October 26, 2026
0

ಹಬ್ಬದ ದಿನಗಳಲ್ಲಿ ಅಥವಾ ಕುಟುಂಬದವರು, ಸ್ನೇಹಿತರು ಒಟ್ಟಿಗೆ ಸೇರಿದಾಗ ಎಲ್ಲರಿಗೂ ಒಂದೇ ಬಗೆಯ ಊಟ ಇಷ್ಟವಾಗುವುದಿಲ್ಲ. ಒಬ್ಬರಿಗೆ ಬಿರಿಯಾನಿ ಬೇಕಿದ್ದರೆ, ಮತ್ತೊಬ್ಬರಿಗೆ ಪಿಜ್ಜಾ ಇಷ್ಟವಾಗಬಹುದು. ಇಂತಹ ಸಮಯದಲ್ಲಿ...

yezdi-trinity-2026-bikes-online-booking-amazon-flipkart

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಅಮೆಜಾನ್, ಫ್ಲಿಪ್‌ಕಾರ್ಟ್‌ಗೂ ಬಂತು ‘ಯೆಜ್ಡಿ ಟ್ರಿನಿಟಿ’; ಬುಕ್‌ ಮಾಡುವುದು ಹೇಗೆ?

by admin
October 26, 2026
0

ಬೆಂಗಳೂರು: ಹಬ್ಬದ ಸೀಸನ್‌ನಲ್ಲಿ ಬೈಕ್ ಖರೀದಿಯನ್ನು ಸುಲಭಗೊಳಿಸಲು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಮುಂದಾಗಿದ್ದು, 2026ರ ಬಹುನಿರೀಕ್ಷಿತ 'ಯೆಜ್ಡಿ ಟ್ರಿನಿಟಿ' ಸರಣಿಯ ಬೈಕುಗಳನ್ನು ಇದೀಗ ಜನಪ್ರಿಯ ಇ-ಕಾಮರ್ಸ್ ತಾಣಗಳಾದ...

ಇನ್‌ಸ್ಟಾಮಾರ್ಟ್‌ನಲ್ಲಿ ಐಫೋನ್, ಬಾಷ್, ಟೈಟಾನ್ ಸೇರಿ ಪ್ರೀಮಿಯಂ ಬ್ರ್ಯಾಂಡ್‌ಗಳ ಮೇಲೆ ಭಾರಿ ರಿಯಾಯಿತಿ

by admin
October 26, 2026
0

ಬೆಂಗಳೂರು: ಹಬ್ಬದ ಸೀಸನ್‌ಗಾಗಿ ಹೊಸ ಗ್ಯಾಜೆಟ್‌ಗಳು, ಗೃಹೋಪಕರಣಗಳು, ಬಟ್ಟೆ ಅಥವಾ ಆಕರ್ಷಕ ಉಡುಗೊರೆಗಳನ್ನು ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಇನ್‌ಸ್ಟಾಮಾರ್ಟ್ ನಿಮಗಾಗಿ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್...

itc-mangaldeep-premium-agarbatti-temple-sandal-gold-cool-splash-price

ಪ್ರೀಮಿಯಂ ಅಗರಬತ್ತಿ ಮಾರುಕಟ್ಟೆ ವಿಸ್ತರಣೆಗೆ ಮುಂದಾದ ಐಟಿಸಿ, 2 ಹೊಸ ಉತ್ಪನ್ನಗಳ ಬಿಡುಗಡೆ; ಏನಿದರ ವಿಶೇಷ?

by admin
October 26, 2026
0

ಸಾಲು ಸಾಲು ಹಬ್ಬಗಳ ಸೀಸನ್ ಆರಂಭವಾಗಿದ್ದು ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಭಾರತದ ಪ್ರಮುಖ ಅಗರಬತ್ತಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಐಟಿಸಿ ಮಂಗಳದೀಪ್ ಮಾರುಕಟ್ಟೆಗೆ ಎರಡು ಹೊಸ ಪ್ರೀಮಿಯಂ...

akasa-air-cafe-akasa-new-menu-chicken-pulimunchi-sushi-filter-coffee

ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ, ಫಿಲ್ಟರ್ ಕಾಫಿಯ ಘಮ! ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್‌

by admin
October 26, 2026
0

ವಿಮಾನ ಪ್ರಯಾಣದ ವೇಳೆ ಊಟದ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಖ್ಯಾತ ವಿಮಾನಯಾನ ಸಂಸ್ಥೆ ಆಕಾಶ ಏರ್, ತನ್ನ 'ಕೆಫೆ ಆಕಾಶ'ದ ಅಡಿಯಲ್ಲಿ ಹೊಸ ಊಟದ ಮೆನುವನ್ನು ಪರಿಚಯಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram