ADVERTISEMENT
Wednesday, October 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ, ಫಿಲ್ಟರ್ ಕಾಫಿಯ ಘಮ! ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್‌

admin by admin
October 26, 2026
in Newsbeat, National, ದೇಶ - ವಿದೇಶ
akasa-air-cafe-akasa-new-menu-chicken-pulimunchi-sushi-filter-coffee

akasa-air-cafe-akasa-new-menu-chicken-pulimunchi-sushi-filter-coffee

Share on FacebookShare on TwitterShare on WhatsappShare on Telegram

ವಿಮಾನ ಪ್ರಯಾಣದ ವೇಳೆ ಊಟದ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಖ್ಯಾತ ವಿಮಾನಯಾನ ಸಂಸ್ಥೆ ಆಕಾಶ ಏರ್, ತನ್ನ ‘ಕೆಫೆ ಆಕಾಶ’ದ ಅಡಿಯಲ್ಲಿ ಹೊಸ ಊಟದ ಮೆನುವನ್ನು ಪರಿಚಯಿಸಿದೆ. ಇಂದಿನ ಪ್ರಯಾಣಿಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ದೇಶಿ ಸ್ವಾದ ಮತ್ತು ಜಾಗತಿಕ ಶೈಲಿಯ ತಿನಿಸುಗಳನ್ನು ಈ ಹೊಸ ಮೆನುವಿನಲ್ಲಿ ಸೇರಿಸಲಾಗಿದೆ.

ಆಕಾಶ ಏರ್ ಸಂಸ್ಥೆ ಆರಂಭವಾದ ನಂತರ ಪರಿಚಯಿಸುತ್ತಿರುವ ನಾಲ್ಕನೇ ಮೆನು ಇದಾಗಿದ್ದು, ಪ್ರಯಾಣಿಕರಿಗೆ ಆರೋಗ್ಯಕರ, ಪ್ರೋಟೀನ್ ಭರಿತ ಹಾಗೂ ವೈವಿಧ್ಯಮಯ ಆಹಾರಗಳನ್ನು ಒದಗಿಸುವ ಉದ್ದೇಶದಿಂದ ಇದನ್ನು ತಯಾರಿಸಲಾಗಿದೆ.

Related posts

shah-rukh-khan-king-movie-new-poster-khatil-nahi-aashiq-hoon-december-2026

“ಖಾತಿಲ್ ನಹಿ.. ಆಶಿಕ್ ಹೂಂ…”; ‘ಕಿಂಗ್’ ಚಿತ್ರದ ಪವರ್‌ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್

October 27, 2026
bonita-das-instamart-delivery-partner-assam-flood-relief-humanity

ದುಡಿಮೆಯ ಜೊತೆಗೆ ಮಿಡಿದ ಮಾನವೀಯತೆ: ಪ್ರವಾಹ ಸಂತ್ರಸ್ತರ ಪಾಲಿಗೆ ಆಶಾಕಿರಣವಾದ ಡೆಲಿವರಿ ಪಾರ್ಟ್‌ನರ್

October 27, 2026

ಕರಾವಳಿ ಸ್ವಾದದಿಂದ ಜಾಗತಿಕ ತಿನಿಸುಗಳವರೆಗೆ ವೈವಿಧ್ಯಮಯ ಆಯ್ಕೆ

ಹೊಸ ಮೆನುವಿನಲ್ಲಿ ಸಾಂಪ್ರದಾಯಿಕ ಹಾಗೂ ಜಾಗತಿಕ ಶೈಲಿಯ ಹಲವು ಹೊಸ ತಿನಿಸುಗಳನ್ನು ಪರಿಚಯಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿಯ ಜನಪ್ರಿಯ ‘ಚಿಕನ್ ಪುಳಿಮುಂಚಿ’ಯ ರುಚಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಸುಶಿ ಶೈಲಿಯಲ್ಲಿ ಬೆರೆಸಿ ‘ಚಿಕನ್ ಪುಳಿಮುಂಚಿ ಸುಶಿ’ಯಾಗಿ ನೀಡಲಾಗುತ್ತಿದೆ.

ಇದರೊಂದಿಗೆ ಪ್ರೋಟೀನ್ ಭರಿತ ವಿಯೆಟ್ನಾಮೀಸ್ ಚಿಕನ್ ಸಲಾಡ್, ಮ್ಯಾಂಗೋ ಆಚಾರಿ ರುಚಿಯೊಂದಿಗೆ ಗ್ರಿಲ್ಡ್ ಚಿಕನ್ ಸ್ಟೀಕ್ ಹಾಗೂ ಏಷ್ಯನ್ ಚಿಕನ್ ಸ್ಯಾಂಡ್‌ವಿಚ್‌ಗಳನ್ನು ಪ್ರಯಾಣಿಕರು ಸವಿಯಬಹುದು.

ಸಸ್ಯಾಹಾರಿಗಳಿಗೆ ಮತ್ತು ಜೈನ ಶೈಲಿಯ ಊಟ ಇಷ್ಟಪಡುವವರಿಗಾಗಿ ತಾಜಾ ತರಕಾರಿಗಳೊಂದಿಗೆ ‘ತಂದೂರಿ ಸೋಯಾ ರ್‍ಯಾಪ್‌’ ಅನ್ನು ಪರಿಚಯಿಸಲಾಗಿದೆ. ಇನ್ನು ವಿಮಾನದಲ್ಲಿ ಪ್ರಯಾಣಿಸುವ ಮಕ್ಕಳಿಗಾಗಿಯೇ ವಿಶೇಷವಾಗಿ ‘ಕಿಡ್ಸ್ ಸ್ಕೈ ಟ್ರೀಟ್ಸ್’ ಕಾಂಬೋ ಕೂಡ ಲಭ್ಯವಿದೆ.

ವಿಶಿಷ್ಟ ಪಾನೀಯಗಳ ಸೇರ್ಪಡೆ

ಊಟದ ಜೊತೆಗೆ ವಿಭಿನ್ನ ಪಾನೀಯಗಳನ್ನು ಸಹ ಮೆನುವಿನಲ್ಲಿ ಸೇರಿಸಲಾಗಿದೆ. ಹಿಮಾಲಯದ ಬೆರ್ರಿ ಹಣ್ಣಿನಿಂದ ತಯಾರಿಸಿದ ‘ಪೆಪ್ಪಿಂಗ್ ಸೀ ಬಕ್‌ಥಾರ್ನ್’, ಕೊಲಂಬಿಯನ್ ಬ್ರೂ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಹಾಗೂ ಸಕ್ಕರೆ ರಹಿತ ಕಾಫಿಯಂತಹ ವಿಶಿಷ್ಟ ಪಾನೀಯಗಳು ಪ್ರಯಾಣಿಕರಿಗೆ ಲಭ್ಯವಿವೆ.

ಹೊಸ ಮೆನುವಿನ ಕುರಿತು ಮಾತನಾಡಿರುವ ಆಕಾಶ ಏರ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ನಾರಾಯಣ್ ಟಿ.ವಿ., “ವಿಮಾನದೊಳಗೆ ನೀಡುವ ಆಹಾರವು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಆಯಾ ಸಂಸ್ಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ. ಭಾರತೀಯ ಮತ್ತು ಜಾಗತಿಕ ಶೈಲಿಯ, ಆರೋಗ್ಯಕರ ಹಾಗೂ ಪ್ರೋಟೀನ್-ಭರಿತ ಆಹಾರಗಳನ್ನು ಪ್ರಯಾಣಿಕರಿಗೆ ನೀಡುವುದೇ ನಮ್ಮ ಪ್ರಮುಖ ಗುರಿಯಾಗಿದೆ,” ಎಂದಿದ್ದಾರೆ.

ಆಕಾಶ ಏರ್ 2022ರ ಆಗಸ್ಟ್‌ನಲ್ಲಿ ತನ್ನ ಸೇವೆ ಆರಂಭಿಸಿದ ದಿನದಿಂದಲೂ ವಿವಿಧ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಊಟವನ್ನು ನೀಡುತ್ತಾ ಬಂದಿದೆ. ಮಕರ ಸಂಕ್ರಾಂತಿ, ದೀಪಾವಳಿ, ಕ್ರಿಸ್‌ಮಸ್, ಓಣಂ, ರಂಜಾನ್, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳ ಸಮಯದಲ್ಲಿ ಆಯಾ ಆಚರಣೆಗೆ ತಕ್ಕಂತಹ ವಿಶೇಷ ತಿನಿಸುಗಳನ್ನು ನೀಡಲಾಗುತ್ತದೆ. ಅಲ್ಲದೆ, ಪ್ರಯಾಣದ ಮಧ್ಯೆ ಹುಟ್ಟುಹಬ್ಬ ಅಥವಾ ಇನ್ನಿತರ ವಿಶೇಷ ದಿನಗಳನ್ನು ಆಚರಿಸಲು ಪ್ರಯಾಣಿಕರು ಮೊದಲೇ ಕೇಕ್ ಆರ್ಡರ್ ಮಾಡುವ ಸೌಲಭ್ಯವೂ ಕೆಫೆ ಆಕಾಶದಲ್ಲಿದೆ.

ಇದರ ಜೊತೆಗೆ ಪರಿಸರ ಕಾಳಜಿಗೂ ಸಂಸ್ಥೆ ಒತ್ತು ನೀಡಿದ್ದು, ಊಟವನ್ನು ನೀಡಲು ಬಳಸುವ ಪ್ಯಾಕೇಜಿಂಗ್ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಕಾಗದದಿಂದ ಮಾಡಲ್ಪಟ್ಟಿದೆ. ಇದರಲ್ಲಿ ಯಾವುದೇ ಬ್ಲೀಚಿಂಗ್ ಅಥವಾ ರಾಸಾಯನಿಕಗಳನ್ನು ಬಳಸಿರುವುದಿಲ್ಲ. ಊಟ ಮಾಡಲು ಪ್ಲಾಸ್ಟಿಕ್ ಬದಲು ನೈಸರ್ಗಿಕವಾಗಿ ಕರಗುವ ಮರದ ಚಮಚಗಳನ್ನು ನೀಡಲಾಗುತ್ತದೆ.

ಈ ಹೊಸ ಮೆನು ಆಕಾಶ ಏರ್‌ನ ಎಲ್ಲಾ ವಿಮಾನಗಳಲ್ಲಿ ಲಭ್ಯವಿದ್ದು, ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್, ಮೊಬೈಲ್ ಆ್ಯಪ್ ಅಥವಾ ಟ್ರಾವೆಲ್ ಏಜೆಂಟ್‌ಗಳ ಮೂಲಕ ಮುಂಚಿತವಾಗಿ ಊಟವನ್ನು ಕಾಯ್ದಿರಿಸಬಹುದಾಗಿದೆ.

ShareTweetSendShare
Join us on:

Related Posts

shah-rukh-khan-king-movie-new-poster-khatil-nahi-aashiq-hoon-december-2026

“ಖಾತಿಲ್ ನಹಿ.. ಆಶಿಕ್ ಹೂಂ…”; ‘ಕಿಂಗ್’ ಚಿತ್ರದ ಪವರ್‌ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್

by admin
October 27, 2026
0

'ಕಿಂಗ್' ಸಿನಿಮಾದ ಪವರ್‌ಫುಲ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ನಿರೀಕ್ಷೆಯ ಕಾವು ಹೆಚ್ಚಿಸಿದ್ದಾರೆ. ತುಟಿಗಳ ನಡುವೆ ಗುಲಾಬಿ ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ...

bonita-das-instamart-delivery-partner-assam-flood-relief-humanity

ದುಡಿಮೆಯ ಜೊತೆಗೆ ಮಿಡಿದ ಮಾನವೀಯತೆ: ಪ್ರವಾಹ ಸಂತ್ರಸ್ತರ ಪಾಲಿಗೆ ಆಶಾಕಿರಣವಾದ ಡೆಲಿವರಿ ಪಾರ್ಟ್‌ನರ್

by admin
October 27, 2026
0

ಪಿಯುಸಿ ಮುಗಿಸಿದ ನಂತರ, ಅಸ್ಸಾಂನ ದಿಬ್ರುಗಢದ ಯುವತಿ ಬೊನಿತಾ ದಾಸ್‌ಗೆ ತಾನು ಅಂದುಕೊಂಡಂತೆ ಬದುಕಬೇಕು ಅನ್ನೋ ಕನಸು. ಅದಕ್ಕವರು ಇನ್‌ಸ್ಟಾಮಾರ್ಟ್‌ನಲ್ಲಿ ಡೆಲಿವರಿ ಪಾರ್ಟ್‌ನರ್ ಆಗಿ ಕೆಲಸ ಶುರು...

bengaluru-airport-digi-yatra-international-passengers-facial-recognition

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: ಕೆಂಪೇಗೌಡ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

by admin
October 27, 2026
0

  ಬೆಂಗಳೂರು: ದೇಶೀಯ ವಿಮಾನ ಪ್ರಯಾಣಿಕರಿಗೆ ತಡೆರಹಿತ ಹಾಗೂ ಸುಗಮ ಪ್ರಯಾಣದ ಅನುಭವ ನೀಡುತ್ತಿರುವ 'ಡಿಜಿ ಯಾತ್ರಾ' ಸೌಲಭ್ಯವನ್ನು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರಿನ...

karnataka-para-asian-games-medal-winners-grand-welcome-bengaluru

ಏಷ್ಯನ್ ಗೇಮ್ಸ್ ಪದಕ ವಿಜೇತ ಕನ್ನಡಿಗರಿಗೆ ಅದ್ದೂರಿ ಸ್ವಾಗತ

by admin
October 27, 2026
0

ಬೆಂಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕ ಕ್ರೀಡಾಪಟುಗಳನ್ನ ಅದ್ದೂರಿಯಾಗಿ ಸ್ವಾಗತಿಲಾಯಿತು. ಪ್ಯಾರಾ ಏಷ್ಯನ್...

jio-platforms-ipo-listing-market-cap-second-most-valuable-company-india

ಲಿಸ್ಟಿಂಗ್ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರತದ ನಂಬರ್ 2 ಕಂಪನಿ ಆಗಬಹುದು ಜಿಯೋ

by admin
October 27, 2026
0

ಮುಂಬೈ, - ಷೇರು ಮಾರುಕಟ್ಟೆಗೆ ಬುಧವಾರ ಪ್ರವೇಶಿಸುತ್ತಿದ್ದಂತೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ದೇಶದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿ ಆಗಬಹುದು. ಗ್ರೇ ಮಾರ್ಕೆಟ್‌ನ ಪ್ರಸ್ತುತ ಪ್ರೀಮಿಯಂ ಆಧಾರದ ಮೇಲೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram