‘ಕಿಂಗ್’ ಸಿನಿಮಾದ ಪವರ್ಫುಲ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ನಿರೀಕ್ಷೆಯ ಕಾವು ಹೆಚ್ಚಿಸಿದ್ದಾರೆ. ತುಟಿಗಳ ನಡುವೆ ಗುಲಾಬಿ ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ ಹೊತ್ತಿಸಿಕೊಂಡಿರುವ ಶಾರುಖ್ ಅವರ ಈ ವಿಭಿನ್ನ ಲುಕ್, ಬಹುನಿರೀಕ್ಷಿತ ಆಕ್ಷನ್ ಎಂಟರ್ಟೈನರ್ ‘ಕಿಂಗ್’ ಚಿತ್ರದಲ್ಲಿನ ಅವರ ರಗಡ್ ಅವತಾರವನ್ನು ಅನಾವರಣಗೊಳಿಸಿದೆ.
ಈ ಹೊಸ ಪೋಸ್ಟರ್ ‘ಕಿಂಗ್’ ಚಿತ್ರದ ಲಾರ್ಜರ್-ದ್ಯಾನ್-ಲೈಫ್ ವೈಭವವನ್ನು ಕಟ್ಟಿಕೊಟ್ಟಿದ್ದು, ಬೆಳ್ಳಿತೆರೆಯ ಮೇಲೆ ಸೂಪರ್ಸ್ಟಾರ್ ಶಾರುಖ್ ಅವರನ್ನು ಈ ರೋಚಕ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೊಂದು ಬಲವಾದ ಕಾರಣ ನೀಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಾಣದ ‘ಕಿಂಗ್’ ಚಿತ್ರವು 2026ರ ಡಿಸೆಂಬರ್ 24 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.








