ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ದುಡಿಮೆಯ ಜೊತೆಗೆ ಮಿಡಿದ ಮಾನವೀಯತೆ: ಪ್ರವಾಹ ಸಂತ್ರಸ್ತರ ಪಾಲಿಗೆ ಆಶಾಕಿರಣವಾದ ಡೆಲಿವರಿ ಪಾರ್ಟ್‌ನರ್

admin by admin
October 27, 2026
in National, Newsbeat, ದೇಶ - ವಿದೇಶ
bonita-das-instamart-delivery-partner-assam-flood-relief-humanity

bonita-das-instamart-delivery-partner-assam-flood-relief-humanity

Share on FacebookShare on TwitterShare on WhatsappShare on Telegram

ಪಿಯುಸಿ ಮುಗಿಸಿದ ನಂತರ, ಅಸ್ಸಾಂನ ದಿಬ್ರುಗಢದ ಯುವತಿ ಬೊನಿತಾ ದಾಸ್‌ಗೆ ತಾನು ಅಂದುಕೊಂಡಂತೆ ಬದುಕಬೇಕು ಅನ್ನೋ ಕನಸು. ಅದಕ್ಕವರು ಇನ್‌ಸ್ಟಾಮಾರ್ಟ್‌ನಲ್ಲಿ ಡೆಲಿವರಿ ಪಾರ್ಟ್‌ನರ್ ಆಗಿ ಕೆಲಸ ಶುರು ಮಾಡಿದರು. ತನಗೆ ತಾನೇ ‘ಬಾಸ್’ ಆಗುವ ಅವಕಾಶವನ್ನು ಈ ಕೆಲಸ ಅವರಿಗೆ ಒದಗಿಸಿಕೊಟ್ಟಿತು. ಆದರೆ, ಬೊನಿತಾ ಪಾಲಿಗೆ ಸ್ವಾತಂತ್ರ್ಯ ಎಂದರೆ ಕೇವಲ ತನಗಾಗಿ ದುಡಿಯುವುದಷ್ಟೇ ಆಗಿರಲಿಲ್ಲ.

ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದಾಗ, ತನ್ನ ಸುತ್ತಮುತ್ತಲಿನ ಜನರ ಕಣ್ಣೀರು ಒರೆಸಲೂ ಆಕೆ ಮುಂದಾದರು. ಅವರ ಈ ನಡೆ ನಿಜಕ್ಕೂ ಸ್ಫೂರ್ತಿದಾಯಕ.

Related posts

shah-rukh-khan-king-movie-new-poster-khatil-nahi-aashiq-hoon-december-2026

“ಖಾತಿಲ್ ನಹಿ.. ಆಶಿಕ್ ಹೂಂ…”; ‘ಕಿಂಗ್’ ಚಿತ್ರದ ಪವರ್‌ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್

October 27, 2026
bengaluru-airport-digi-yatra-international-passengers-facial-recognition

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: ಕೆಂಪೇಗೌಡ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

October 27, 2026

ಹಾಗೆ ನೋಡಿದರೆ ಇತರ ಯುವಜನರಂತೆ ಬೊನಿತಾ ಕೂಡ ಆರಂಭದಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದರು. ಆದರೆ ದಿನಕ್ಕೆ 8-9 ಗಂಟೆಗಳ ಕಾಲ ಕಷ್ಟಪಟ್ಟು ದುಡಿದರೂ ಬರುವ ಸಂಬಳ ತೀರಾ ಕಡಿಮೆಯಿತ್ತು. ಕಟ್ಟುನಿಟ್ಟಾದ ಕೆಲಸದ ವೇಳಾಪಟ್ಟಿ ಆಕೆಗೆ ಇಷ್ಟವಿರಲಿಲ್ಲ. ದಿಬ್ರುಗಢದಲ್ಲಿ ಮೇ 2026ರಲ್ಲಿ ಇನ್‌ಸ್ಟಾಮಾರ್ಟ್ ಸೇವೆ ಆರಂಭವಾದಾಗ, ಅದರ ಮೊದಲ ಡೆಲಿವರಿ ಪಾರ್ಟ್‌ನರ್‌ಗಳಲ್ಲಿ ಒಬ್ಬರಾಗಿ ಆಕೆ ಸೇರ್ಪಡೆಯಾದರು.

ಈ ಒಂದು ನಿರ್ಧಾರ ಆಕೆಯ ದಿನಚರಿಯನ್ನೇ ಬದಲಾಯಿಸಿತು. ತನಗೆ ಅನುಕೂಲವಾದ ಸಮಯದಲ್ಲಿ ಕೆಲಸ ಮಾಡುತ್ತಲೇ ಅವರು ತಮ್ಮ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಂಡರು. ಇದರಿಂದ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಕುಟುಂಬವನ್ನು ಬೆಂಬಲಿಸುವ ಶಕ್ತಿಯೂ ಆಕೆಗೆ ಸಿಕ್ಕಿತು.

ಮನೆ ಕಟ್ಟುವ ಜವಾಬ್ದಾರಿ ಮತ್ತು ಬೇಕರಿಯ ಕನಸು

ಹೀಗೆ ದುಡಿದು ಕೂಡಿಟ್ಟ ಹಣದಲ್ಲಿ ಬೊನಿತಾ ತನ್ನ ಸಹೋದರನ ಜೊತೆಗೂಡಿ ಕುಟುಂಬಕ್ಕಾಗಿ ಒಂದು ಸುಂದರವಾದ ಮನೆಯನ್ನು ಕಟ್ಟಿಸುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ಈಗ ಆಕೆಗೊಂದು ಸಣ್ಣ ಕನಸಿದೆ. ಅದೇನಂದ್ರೆ, ದಿಬ್ರುಗಢದಲ್ಲಿ ಕೇಕ್ ಮತ್ತು ಪೇಸ್ಟ್ರಿಗಳಿಗಾಗಿಯೇ ವಿಶೇಷವಾದ ಸ್ವಂತ ಬೇಕರಿಯೊಂದನ್ನು ತೆರೆಯಬೇಕೆಂಬುದು. ಅದಕ್ಕಾಗಿ ಅವರು ಈಗಿನಿಂದಲೇ ಹಣವನ್ನು ಕೂಡಿಡುತ್ತಿದ್ದಾಳೆ.

“ನಾನು ಡೆಲಿವರಿ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇ ಅದರಲ್ಲಿದ್ದ ಸ್ವಾತಂತ್ರ್ಯಕ್ಕಾಗಿ. ಯಾವಾಗ ಕೆಲಸ ಮಾಡಬೇಕು, ಯಾವಾಗ ರಜೆ ಬೇಕು ಎಂದು ನಾನೇ ನಿರ್ಧರಿಸುತ್ತೇನೆ. ನನಗೆ ನಾನೇ ಬಾಸ್. ಈ ಸ್ವಾತಂತ್ರ್ಯ ನನಗೆ ತುಂಬಾ ಮುಖ್ಯ,” ಎಂದು ಹೆಮ್ಮೆಯಿಂದ ಹೇಳುವ ಬೊನಿತಾ, ಕುಟುಂಬಕ್ಕೆ ಅಗತ್ಯವಿದ್ದಾಗ ಅವರ ಜೊತೆ ನಿಲ್ಲುವುದರ ಜೊತೆ ಬಿಡುವಿನ ಸಮಯದಲ್ಲಿ ತನ್ನ ಬೇಕಿಂಗ್ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.

ಬಾಲ್ಯದ ನೆನಪು, ಕರಗಿದ ಮನಸ್ಸು

ಬೊನಿತಾ ಅನುಭವಿಸುತ್ತಿದ್ದ ಇದೇ ಸ್ವಾತಂತ್ರ್ಯವು, ಕಷ್ಟದಲ್ಲಿದ್ದ ಸಮಾಜದ ನೆರವಿಗೆ ನಿಲ್ಲಲು ಆಕೆಗೆ ದೊಡ್ಡ ಅವಕಾಶ ಮಾಡಿಕೊಟ್ಟಿತು. ನದಿ ತೀರದಲ್ಲಿಯೇ ಬೆಳೆದ ಬೊನಿತಾ ಕುಟುಂಬ, 2013 ಮತ್ತು 2015ರ ನಡುವೆ ಭೀಕರ ಪ್ರವಾಹದ ಕಷ್ಟಗಳನ್ನು ಉಂಡಿತ್ತು.

ಇತ್ತೀಚೆಗೆ ಅಸ್ಸಾಂನಲ್ಲಿ ಮತ್ತೆ ಪ್ರವಾಹ ಬಂದಾಗ, ಅವರ ಹೊಸ ಮನೆ ಎತ್ತರದ ಪ್ರದೇಶದಲ್ಲಿದ್ದ ಕಾರಣ ಸುರಕ್ಷಿತವಾಗಿತ್ತು. ಆದರೆ, ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನೇ ಈಗ ಇತರ ಕುಟುಂಬಗಳು ಅನುಭವಿಸುತ್ತಿರುವುದನ್ನು ಕಂಡು ಆಕೆಯ ಮನಸ್ಸು ಮರುಗಿತು. ಕೇವಲ ಮೂಕಪ್ರೇಕ್ಷಕಿಯಾಗಿರಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ.

ತಕ್ಷಣವೇ ಕಾರ್ಯಪ್ರವೃತ್ತಳಾದ ಬೊನಿತಾ, ತನ್ನ ಜೊತೆ ಕೆಲಸ ಮಾಡುವ ಇತರ ಡೆಲಿವರಿ ಪಾರ್ಟ್‌ನರ್‌ಗಳಿಂದ ಹಣ ಸಂಗ್ರಹಿಸಲು ಶುರುಮಾಡಿದ್ರು. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಲಿ ಎಂಬ ಉದ್ದೇಶದಿಂದ ಕೇವಲ 50 ರೂ.ಗಳ ಕನಿಷ್ಠ ಮೊತ್ತವನ್ನು ನಿಗದಿಪಡಿಸಿದ್ರು.

ಇದು ಸಣ್ಣ ಮಟ್ಟದಲ್ಲಿ, ವೈಯಕ್ತಿಕವಾಗಿ ಶುರುವಾದ ಪ್ರಯತ್ನವಾದರೂ ನೋಡನೋಡುತ್ತಿದ್ದಂತೆ ದೊಡ್ಡ ಅಭಿಯಾನವಾಗಿ ಬದಲಾಯಿತು. ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಇನ್‌ಸ್ಟಾಮಾರ್ಟ್ ಸಂಸ್ಥೆ ಕೂಡ, ಅವರು ಸಂಗ್ರಹಿಸಿದ ನಿಧಿಗೆ ತನ್ನ ಕಡೆಯಿಂದ ಮತ್ತಷ್ಟು ಹಣವನ್ನು ಸೇರಿಸಿತು.

ಶಿವಸಾಗರದ ಹಳ್ಳಿಗಳಲ್ಲಿ ಮೂಡಿದ ಮಂದಹಾಸ

ಈ ಹಣವನ್ನು ಬಳಸಿಕೊಂಡು ಬೊನಿತಾ ಮತ್ತು ಆಕೆಯ ತಂಡ ಸ್ಥಳೀಯ ಎನ್‌ಜಿಒ ಒಂದರ ಜೊತೆಗೂಡಿತು. ಅಕ್ಕಿ, ಬೇಳೆ, ಹಾಲು, ಅಡುಗೆ ಎಣ್ಣೆ ಮತ್ತು ತರಕಾರಿಗಳಂತಹ ಅಗತ್ಯ ದಿನಸಿ ವಸ್ತುಗಳನ್ನು ಖರೀದಿಸಿ, ಶಿವಸಾಗರ ಜಿಲ್ಲೆಯಾದ್ಯಂತ ಪ್ರವಾಹಕ್ಕೆ ತುತ್ತಾದ ಹಳ್ಳಿಗಳ 500ಕ್ಕೂ ಹೆಚ್ಚು ಕುಟುಂಬಗಳಿಗೆ ನೇರವಾಗಿ ಪರಿಹಾರ ಕಿಟ್‌ಗಳನ್ನು ವಿತರಿಸಿದರು.

“ನಾನು ಕೂಡ ಪ್ರವಾಹದ ಕಷ್ಟಗಳನ್ನು ಅನುಭವಿಸಿದ್ದೇನೆ. ಹಾಗಾಗಿ ಆ ಕುಟುಂಬಗಳು ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗುತ್ತದೆ. ಇಷ್ಟೊಂದು ಜನ ಕಷ್ಟಪಡುತ್ತಿರುವಾಗ ನಾನು ಸುಮ್ಮನೆ ನಿಲ್ಲಲು ಸಾಧ್ಯವಾಗಲಿಲ್ಲ. ನಾನೊಬ್ಬಳು ಸಾಮಾನ್ಯ ಡೆಲಿವರಿ ಪಾರ್ಟ್‌ನರ್ ಆಗಿರಬಹುದು, ಆದರೆ ನಾವೆಲ್ಲರೂ ಒಟ್ಟಾಗಿ ಸೇರಿದರೆ ಸಮಾಜದಲ್ಲಿ ಖಂಡಿತಾ ದೊಡ್ಡ ಬದಲಾವಣೆ ತರಬಹುದು,” ಎಂದು ಬೊನಿತಾ ಹೇಳುವಾಗ ಆಕೆಯ ಕಣ್ಣುಗಳಲ್ಲಿ ಸಾರ್ಥಕತೆಯ ಭಾವವಿತ್ತು.

ಬೊನಿತಾ ದಾಸ್ ಅವರ ಈ ಕಥೆ ಓರ್ವ ಹೆಣ್ಣು ತನ್ನ ನಿರ್ಧಾರಗಳ ಮೂಲಕ ಸುತ್ತಮುತ್ತಲಿನ ಜನರ ಬದುಕಿನಲ್ಲಿ ಹೇಗೆ ಅರ್ಥಪೂರ್ಣ ಬದಲಾವಣೆ ತರಬಹುದು ಎಂಬುದಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ. ಅಷ್ಟೇ ಅಲ್ಲ ಬೊನಿತಾ ಇಂದು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.

ShareTweetSendShare
Join us on:

Related Posts

shah-rukh-khan-king-movie-new-poster-khatil-nahi-aashiq-hoon-december-2026

“ಖಾತಿಲ್ ನಹಿ.. ಆಶಿಕ್ ಹೂಂ…”; ‘ಕಿಂಗ್’ ಚಿತ್ರದ ಪವರ್‌ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್

by admin
October 27, 2026
0

'ಕಿಂಗ್' ಸಿನಿಮಾದ ಪವರ್‌ಫುಲ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ನಿರೀಕ್ಷೆಯ ಕಾವು ಹೆಚ್ಚಿಸಿದ್ದಾರೆ. ತುಟಿಗಳ ನಡುವೆ ಗುಲಾಬಿ ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ...

bengaluru-airport-digi-yatra-international-passengers-facial-recognition

ಪದೇ ಪದೇ ದಾಖಲೆ ತೋರಿಸುವ ಕಿರಿಕಿರಿಯಿಲ್ಲ: ಕೆಂಪೇಗೌಡ ಏರ್‌ಪೋರ್ಟ್‌ನ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಬಂತು ‘ಡಿಜಿ ಯಾತ್ರಾ’!

by admin
October 27, 2026
0

  ಬೆಂಗಳೂರು: ದೇಶೀಯ ವಿಮಾನ ಪ್ರಯಾಣಿಕರಿಗೆ ತಡೆರಹಿತ ಹಾಗೂ ಸುಗಮ ಪ್ರಯಾಣದ ಅನುಭವ ನೀಡುತ್ತಿರುವ 'ಡಿಜಿ ಯಾತ್ರಾ' ಸೌಲಭ್ಯವನ್ನು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರಿನ...

karnataka-para-asian-games-medal-winners-grand-welcome-bengaluru

ಏಷ್ಯನ್ ಗೇಮ್ಸ್ ಪದಕ ವಿಜೇತ ಕನ್ನಡಿಗರಿಗೆ ಅದ್ದೂರಿ ಸ್ವಾಗತ

by admin
October 27, 2026
0

ಬೆಂಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕ ಕ್ರೀಡಾಪಟುಗಳನ್ನ ಅದ್ದೂರಿಯಾಗಿ ಸ್ವಾಗತಿಲಾಯಿತು. ಪ್ಯಾರಾ ಏಷ್ಯನ್...

jio-platforms-ipo-listing-market-cap-second-most-valuable-company-india

ಲಿಸ್ಟಿಂಗ್ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರತದ ನಂಬರ್ 2 ಕಂಪನಿ ಆಗಬಹುದು ಜಿಯೋ

by admin
October 27, 2026
0

ಮುಂಬೈ, - ಷೇರು ಮಾರುಕಟ್ಟೆಗೆ ಬುಧವಾರ ಪ್ರವೇಶಿಸುತ್ತಿದ್ದಂತೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ದೇಶದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿ ಆಗಬಹುದು. ಗ್ರೇ ಮಾರ್ಕೆಟ್‌ನ ಪ್ರಸ್ತುತ ಪ್ರೀಮಿಯಂ ಆಧಾರದ ಮೇಲೆ...

ut-khader-neurosurgical-robot-mahabodhi-brains-hospital-bengaluru

ಆರೋಗ್ಯ ಸೇವೆ ದಕ್ಷತೆಗೆ ತಜ್ಞ ವೈದ್ಯರ ಕಮಿಟಿ: ಯು. ಟಿ. ಖಾದರ್

by admin
October 27, 2026
0

ಮಹಾಬೋಧಿ ಬ್ರೈನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನ್ಯೂರೋಸರ್ಜಿಕಲ್ ರೋಬೋಟ್ ಆರೋಗ್ಯವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ಮುನ್ನೋಟ ಸಲಹಾ ಸಮಿತಿ ರಚಿಸುವುದಾಗಿ ಆರೋಗ್ಯ ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram