BSF | ಸಹೋದ್ಯೋಗಿಗಳ ಮೇಲೆ ಭೀಕರ ಗುಂಡಿನ ದಾಳಿ
ಸಹೋದ್ಯೋಗಿಗಳ ಮೇಲೆ ಬಿಎಸ್ಎಫ್ನ ಯೋಧ ಫೈರಿಂಗ್
ಪಂಜಾಬ್ನ ಅಮೃತಸರದ ಖಾಸಾದಲ್ಲಿ ನಡೆದ ಘಟನೆ
ಸತ್ತೆಪ್ಪ ಎಸ್ಕೆ ಎಂಬಾತ ಗುಂಡು ಹಾರಿಸಿದ ಯೋಧ
ಗುಂಡಿನ ಚಕಮಕಿಯಲ್ಲಿ ಸತ್ತೆಪ್ಪ ಸೇರಿ ಐವರು ಸಾವು
ಪಂಜಾಬ್ : ಬಿಎಸ್ ಎಫ್ ನ ಯೋಧನೋರ್ವ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಮೃತಸರ ಬಿಎಸ್ಎಫ್ ಮುಖ್ಯಕಚೇರಿ 144 ಬಿಎನ್ ಖಾಸಾದಲ್ಲಿ ಘಟನೆ ನಡೆದಿದ್ದು, ಸತ್ತೆಪ್ಪ ಎಸ್ಕೆ ಎಂಬಾತ ಗುಂಡು ಹಾರಿಸಿದ್ದಾನೆ.
ಈ ಗುಂಡಿನ ಚಕಮಕಿಯಲ್ಲಿ ಸತ್ತೆಪ್ಪ ಸೇರಿ ಐವರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.
ಸತ್ತೆಪ್ಪ ಎಸ್ಕೆ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.