ಸರ್ಕಾರಿ ನೌಕರರ ವಿರುದ್ಧದ ದೂರುಗಳ ಏಕಾಏಕಿ ತನಿಖೆಗೆ ಬ್ರೇಕ್!
ಬೆಂಗಳೂರು : ಸರ್ಕಾರಿ ನೌಕರರ ವಿರುದ್ಧದ ದೂರುಗಳ ಏಕಾಏಕಿ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ.
ಈ ಕುರಿತು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಬಿಎಸ್ ಯಡಿಯೂರಪ್ಪ, ನಾಮಧೇಯ ದೂರುಗಳನ್ನ ತನಿಖೆಗೆ ಏಕಾಏಕಿ ಒಳಪಡಿಸದಿರಲು ನಿರ್ಧರಿಸಿದ್ದಾರೆ.
ಪತ್ರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಕರ್ನಾಟಕ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಅನಾಮಧೇಯ ದೂರುಗಳನ್ನು ತನಿಖೆಗೆ ಒಳಪಡಿಸದೇ ಇರುಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಸುತ್ತೋಲೆ ಹೊರಡಿಸಿತ್ತಲಾಗಿತ್ತು.
ಆದ್ರೆ ಸದರಿ ಸುತ್ತೋಲೆಯನ್ನು ಅನೇಕರು ದುರುಪಯೋಗಪಡಿಸಿಕೊಂಡು ನಕಲಿ ಹೆಸರು ಮತ್ತು ನಕಲಿ ವಿಳಾಸವನ್ನು ಬಳಸಿಕೊಂಡು ರಾಜ್ಯ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಬೇನಾಮಿ ದೂರುಗಳನ್ನು ನೀಡಿ ನೌಕರರನ್ನು ಅನಗತ್ಯವಾಗಿ ತನಿಖೆಗೆ ವಿಚಾರಣೆಗೆ ಒಳಪಡಿಸುವುದರಿಂದ ಅಧಿಕಾರಿ/ನೌಕರರಿಗೆ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗಿ ದಕ್ಷ ಹಾಗೂ ಪ್ರಾಮಾಣಿಕ ನೌಕರರಿಗೆ ಧಕ್ಕೆ ಉಂಟಾಗುತ್ತಿದೆಯಲ್ಲದೇ,
ಆಡಳಿತಾತ್ಮಕ ಸಮಸ್ಯೆಗಳು ಉದ್ಭವವಾಗಿ ಸರ್ಕಾರಿ ಕೆಲಸ ಕಾರ್ಯಗಳು/ಯೋಜನೆಗಳು ಕುಂಠಿತವಾಗುತ್ತಿವೆ.
ಇದನ್ನು ತಪ್ಪಿಸಿ ಮುಕ್ತ ಮತ್ತು ನಿರ್ಭೀತಿಯಿಂದ ಸರ್ಕಾರಿ ಅಧಿಕಾರಿ/ನೌಕರರ ಕರ್ತವ್ಯ ನಿರ್ವಹಿಸಲು ಅನುಕೂಲ ಕಲ್ಪಿಸಲು ಸರ್ಕಾರಿ ನೌಕರ ಸಂಘ ಮನವಿ ಮಾಡಿತ್ತು. ಈ ಮನವಿಗೆ ಇದೀಗ ಸ್ಪಂದಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಸರ್ಕಾರಿ ನೌಕರರ ವಿರುದ್ಧದ ದೂರುಗಳ ಏಕಾಏಕಿ ತನಿಖೆಗೆ ಹಾಕಿದ್ದಾರೆ.
