ಬೆಂಗಳೂರು: ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಸ್ಟ್ 15ರಂದು ಧ್ವಜಾರೋಹಣ ನಡೆಸುವುದು ಅನುಮಾನ ಎನ್ನಲಾಗಿದೆ.
ಆ.15ರ ಸ್ವಾತಂತ್ರ್ಯ ದಿನಾಚರಣೆಯ ದಿನ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪ್ರತಿ ವರ್ಷ ಮುಖ್ಯಮಂತ್ರಿಗಳು ಧ್ವಜಾರೋಹಣ ನಡೆಸುವುದು ವಾಡಿಕೆ. ಆದರೆ, ಈ ಬಾರಿ ಯಡಿಯೂರಪ್ಪ ಅವರಿಗೆ ಕೊರೊನಾ ಬಂದಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ವೇಳೆ ಈ ವಾರವೇ ಯಡಿಯೂರಪ್ಪ ಗುಣಮುಖರಾಗಿ ಕೊರೊನಾ ನೆಗೆಟಿವ್ ಬಂದು ಡಿಶ್ಚಾರ್ಜ ಆದರೂ 14 ದಿನ ಹೋಂಕ್ವಾರಂಟೈನ್ ಒಳಗಾಗಲೇ ಬೇಕಾಗುತ್ತದೆ.
ಒಂದು ವೇಳೆ ಆ.7 ಅಥವಾ 8ರಂದು ಡಿಶ್ಚಾರ್ಜ್ ಆದರೂ, ಆ.15ರಂದು ಧ್ವಜಾರೋಹಣ ನಡೆಸುವುದು ಅನುಮಾನ. ಆ.15ರಂದು ಮತ್ತೊಮ್ಮ ಯಡಿಯೂರಪ್ಪ ಅವರಿಗೆ ವೈದ್ಯರು ಕೊರೊನಾ ಟೆಸ್ಟ್ ಮಾಡಲಿದ್ದಾರೆ. ಹೀಗಾಗಿ ಬಿಎಸ್‍ವೈ ಕ್ವಾರಂಟೈನ್ ಅವಧಿ ಆ.16ಕ್ಕೆ ಮುಗಿಯುವುದರಿಂದ ಅವರು ಧ್ವಜಾರೋಹಣ ಮಾಡುವುದು ಅನುಮಾನ ಎನ್ನಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವ ಮುಖ್ಯಮಂತ್ರಿಗಳು ರಾಜ್ಯವನ್ನುದ್ದೇಶಿ ಮಾತನಾಡುತ್ತಾರೆ. ತಮ್ಮ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಪಟ್ಟಿಯನ್ನು ಜನತೆಯ ಮುಂದಿಡುತ್ತಾರೆ. ಆದರೆ, ಈ ಬಾರಿ ಯಡಿಯೂರಪ್ಪ ಅವರಿಗೆ ಈ ಅವಕಾಶ ಕೈತಪ್ಪುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಧ್ವಜಾರೋಹಣ ಮಾಡಬಹುದಾಗಿದೆ. ಹೀಗಾಗಿ ಯಾರು ಧ್ವಜಾರೋಹಣ ಮಾಡುತ್ತಾರೆ ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ವಾರದೊಳಗೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಬರುವ ಸಾಧ್ಯತೆ ಇದೆ.
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರವನ್ನು ನಿತ್ಯ 21 ಬಾರಿ ಪಠಿಸಿ ಚಮತ್ಕಾರ ನೋಡಿ
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರವನ್ನು ನಿತ್ಯ 21 ಬಾರಿ ಪಠಿಸಿ ಚಮತ್ಕಾರ ನೋಡಿ ಪ್ರತಿರಾತ್ರಿ ಮಲಗುವ ಮುನ್ನ ಈ ಒಂದು...