20 ರಿಂದ 25 ವರ್ಷಗಳ ದೂರದೃಷ್ಟಿಯೊಂದಿಗೆ ಬಜೆಟ್ ಮಂಡನೆ – ಸೀತಾರಾಮನ್
2022-23ನೇ ಸಾಲಿನ ಕೇಂದ್ರ ಬಜೆಟ್ ನಂತರ ಉದ್ಯಮಿಗಳು, ಉದ್ಯಮ ರಂಗದ ಪ್ರಮುಖರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿಂದು ಸಂವಾದ ನಡೆಸಿದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದಂತಹ ಮುಂಗಡ ಪತ್ರವನ್ನು ಮಂಡನೆ ಮಾಡಲಾಗಿದೆ ಎಂದು ಹೇಳಿದರು. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಏಕರೂಪದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಈ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದರು.
ಮುಂಗಡ ಪತ್ರದಲ್ಲಿ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಉದ್ಯಮಿಗಳ ಇನ್ನಿತರ ಸಮಸ್ಯೆ ಮತ್ತು ಗೊಂದಲಗಳಿಗೆ ಕೇಂದ್ರ ನೇರ ತೆರಿಗೆ ಮಂಡಳಿ ಸೇರಿದಂತೆ ವಿವಿಧ ಮಂಡಳಿಗಳು ಸ್ಪಷ್ಟನೆ ನೀಡಿ, ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಮುಂಗಡ ಪತ್ರವನ್ನು ಮುಂದಿನ 20 ರಿಂದ 25 ವರ್ಷಗಳ ದೂರದೃಷ್ಚಿಯನ್ನು ಇಟ್ಟುಕೊಂಡು ಪ್ರಸ್ತುತಪಡಿಸಲಾಗಿದೆ. ಇದರ ಜೊತೆಗೆ ಮೂಲ ಸೌಕರ್ಯಗಳ ಮೇಲಿನ ಹೂಡಿಕೆಗೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.








