ಕೋಮು ಸಂಘರ್ಷಕ್ಕೆ ಹರಿಯಾಣ ರಾಜ್ಯ ಸಂಪೂರ್ಣವಾಗಿ ತತ್ತರಿಸಿದೆ. ಸದ್ಯ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೆ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರ ನಡೆಸುತ್ತಿದ್ದಾರೆ. ಹೀಗಾಗಿ ಜನ- ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದ್ದು, ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ.
ಹರಿಯಾಣದಲ್ಲಿ ನಡೆದ ಕೋಮುಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ (Bulldozer) ಶಾಕ್ ನೀಡಿದೆ. ನೂಹ್ ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ ನೆಲಸಮಗೊಳಿಸಿದೆ.
ಸರ್ಕಾರಿ ಜಮೀನನ್ನು ಅತಿಕ್ರಮಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಆದೇಶದಂತೆ ಗಲಭೆಕೋರರು ವಾಸವಿರುವ ಮನೆಗಳನ್ನು ತೆರವುಗೊಳಿಸಲಾಗಿದೆ. ಬಾಂಗ್ಲಾದೇಶದಿಂದ ಬಂದ ಅಕ್ರಮವಾಗಿ ಮೊದಲು ಅಸ್ಸಾಂನಲ್ಲಿ ವಾಸವಿದ್ದರು.
ಸುಮಾರು ಒಂದು ಎಕರೆ ಜಮೀನಿನಲ್ಲಿ 250ಕ್ಕೂ ಅಧಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಗುಡಿಸಲುಗಳನ್ನ ನೆಲಸಮಗೊಳಿಸಲಾಗಿದೆ ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 41 ಕೇಸ್ಗಳು ದಾಖಲಾಗಿದ್ದು, 176 ಮಂದಿಯನ್ನ ಬಂಧಿಸಲಾಗಿದೆ. 90 ಜನರನ್ನು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ








