ಬುಲ್ಲಿ ಬಾಯಿ ಆಪ್ ಪ್ರಕರಣ ಒಡಿಶಾದಲ್ಲಿ ಮತ್ತೊಬ್ಬ ಆರೋಪಿ ಬಂಧನ
ಈ ತಿಂಗಳ ಆರಂಭದಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಹರಾಜಿಗೆ ಹಾಕಲಾದ ಬುಲ್ಲಿ ಬಾಯಿ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಗುರುವಾರ ಮತ್ತೊಬ್ಬ ವ್ಯಕ್ತಿಯನ್ನ ಬಂಧಿಸಿದ್ದಾರೆ. ಆರೋಪಿ ನೀರಜ್ ಸಿಂಗ್ ನನ್ನು ಮುಂಬೈ ಪೊಲೀಸ್ ಅಪರಾಧ ವಿಭಾಗದ ಸೈಬರ್ ವಿಭಾಗ ಒಡಿಶಾದಿಂದ ಬಂಧಿಸಿದೆ.
ತನಿಖೆಯ ಸಂದರ್ಭದಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಸಿಂಗ್ ಅವರನ್ನು ಬಂಧಿಸಲಾಗಿದೆ, ಶೀಘ್ರದಲ್ಲೇ ಅವರನ್ನು ಮುಂಬೈಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೀರಜ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಂಧಿಸಿರುವ ನಾಲ್ಕನೇ ಆರೋಪಿ ಮತ್ತು ಒಟ್ಟಾರೆ ಐದನೇ ಆರೋಪಿ. ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ನನ್ನು ದೆಹಲಿ ಪೊಲೀಸರು ಜನವರಿ 6 ರಂದು ಅಸ್ಸಾಂನ ಜೋರ್ಹತ್ ನಿಂದ ಬಂಧಿಸಿದ್ದದ್ದರು. ಬಂಧನದ ನಂತರ, ಬಿಷ್ಣೋಯ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ತನ್ನ ಭೋಪಾಲ್, ಮಧ್ಯಪ್ರದೇಶ ಮೂಲದ ಕಾಲೇಜಿನಿಂದ ಅಮಾನತುಗೊಳಿಸಲಾಯಿತು,
ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಅವರನ್ನು ಈ ಹಿಂದೆ ಆಪ್ ಕ್ರಿಯೇಟ್ ಮಾಡುವುದಕ್ಕೆ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲಾಗಿತ್ತು. ಝಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರೆ, ನಂತರದ ಇಬ್ಬರನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ.
ಜನವರಿ 14 ರಂದು ಮುಂಬೈನ ಸ್ಥಳೀಯ ನ್ಯಾಯಾಲಯವು ಸಿಂಗ್ ಮತ್ತು ರಾವತ್ ಅವರನ್ನು ತಿಂಗಳ 28 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.








