ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮುಂದುವರೆದ ಬೆನ್ನಲ್ಲೇ, ಸಚಿವ ಬಿ.ಶ್ರೀರಾಮುಲು ಅವರಿಗೆ ಕೊರೊನಾ ಕಂಟಕವಾಗಿ ಪರಿಣಮಿಸಿದ್ದು, ಆರೋಗ್ಯ ಖಾತೆಯಿಂದ ಕೊಕ್ ನೀಡುವ ಸಾಧ್ಯತೆ ಇದೆ.
ಶ್ರೀರಾಮುಲು ಬಳಿ ಇರುವ ಆರೋಗ್ಯ ಖಾತೆಯನ್ನು ಸ್ವತಃ ವೈದ್ಯರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ನೀಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಳೆ ಸಂಪುಟದ ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸುವ ಸಾಧ್ಯತೆ ಇದೆ. ಈ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‍ಗೆ ಬಂಪರ್ ಗಿಫ್ಟ್(Bumper Gift for Dr Sudhakar) ಕೊಟ್ಟಂತಾಗಲಿದೆ.
ರಾಜ್ಯದಲ್ಲಿ ಕೊರೊನಾ ವಕ್ಕರಿಸಿದ ದಿನದಿಂದಲೂ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು.
ಆರೋಗ್ಯ ಇಲಾಖೆಯಲ್ಲಿ ಸುಧಾಕರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹಲವು ಬಾರಿ ಯಡಿಯೂರಪ್ಪ ಮುಂದೆ ಅಸಮಾಧಾನ ಹೊರಹಾಕಿದ್ದರು. ಆರೋಗ್ಯ ಇಲಾಖೆಗೆ ಸಂಬಂಧಿಸಿದ ತೀರ್ಮಾನಗಳನ್ನು ಸುಧಾಕರ್ ಮಾಧ್ಯಮಗಳ ಮುಂದೆ ಹೇಳುವುದು, ಅಧಿಕಾರಿಗಳ ಸಭೆ ನಡೆಸುವುದು ಶ್ರೀರಾಮುಲು ಸಿಟ್ಟಿಗೆ ಕಾರಣವಾಗಿತ್ತು.
ಹೀಗಾಗಿ ಕೊರೊನಾ ಉಸ್ತವಾರಿಯನ್ನು ಒಮ್ಮೆ ಶ್ರೀರಾಮುಲು, ಮತ್ತೊಮ್ಮೆ ಸುಧಾಕರ್, ಮಗದೊಮ್ಮೆ ಸಚಿವ ಸುರೇಶ್ ಕುಮಾರ್‍ಗೂ ಯಡಿಯೂರಪ್ಪ ವಹಿಸಿದ್ದರು.
ಅಷ್ಟಾದರೂ ರಾಮುಲು ಅಸಮಾಧಾನ ಕೊನೆಯಾಗಿರಲಿಲ್ಲ. ಹೀಗಾಗಿ ಪುನಃ ರಾಮುಲು ಅವರಿಗೆ ಕೊರೊನಾ ಉಸ್ತುವಾರಿ ನೀಡಲಾಗಿತ್ತು. ಇಬ್ಬರು ಸಚಿವರ ನಡುವಿನ ಮುಸುಕಿನ ಗುದ್ದಾಟ ವಿರೋಧ ಪಕ್ಷಗಳಿಗೆ ಆಹಾರವಾಗಿ ಪರಿಣಮಿಸಿತ್ತು. ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ತೀವ್ರಗೊಂಡ ಕಾರಣ ಪರಿಣಾಮಕಾರಿ ತೀರ್ಮಾನಗಳನ್ನು ಕೈಗೊಳ್ಳಲು ವೈದ್ಯಕೀಯ ಸಚಿವರೂ ಆದ ಸುಧಾಕರ್ ಸಮರ್ಥರು ಎಂಬು ಭಾವಿಸಿ ಆರೋಗ್ಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲು ಸಮಾಜ ಕಲ್ಯಾಣ ಖಾತೆ…?
ಆರೋಗ್ಯ ಇಲಾಖೆ ನಿಭಾಯಿಸುವುದು ಶ್ರೀರಾಮುಲುಗೆ ಸ್ವಲ್ಪ ಕಷ್ಟವಾಗುತ್ತಿತ್ತು ಎನ್ನಲಾಗಿದೆ. ಮೆಡಿಕಲ್ ವಿಚಾರಕ್ಕೆ ವಿಚಾರಕ್ಕೆ ಸಂಬಂಧಿಸಿದ ಕೆಲ ತಾಂತ್ರಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ರಾಮುಲು ಕಷ್ಟಪಡುತ್ತಿರುವುದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಬಹಿರಂಗಾವಾಗುತ್ತಿತ್ತು. ಇದು ಸರ್ಕಾರಕ್ಕೆ ಮುಜುಗರವನ್ನು ತಂದಿದ್ದೂ ಇದೆ.
ಹೀಗಾಗಿ ಶ್ರೀರಾಮುಲು ಹೇಳಿ ಕೇಳಿ ಹಿಂದುಳಿದ ಸಮುದಾಯದಿಂದ ಬಂದವರು. ಹಿಂದುಳಿದ, ಪರಿಶಿಷ್ಟರ ಕಷ್ಟಕಾರ್ಪಣ್ಯಗಳು, ದೀನ ದಲಿತರ ನೋವು ಶ್ರೀರಾಮುಲು ಅವರಿಗೆ ಬೇಗ ಅರ್ಥವಾಗುತ್ತದೆ. ಹೀಗಾಗಿ ಶ್ರೀರಾಮುಲು ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ಬಳಿ ಹೆಚ್ಚುವರಿಯಾಗಿ ಇರುವ ಹಿಂದುಳಿದ ಹಾಗೂ ಸಮಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲು ಸಿಎಂ ಬಿಎಸ್‍ವೈ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಗೋವಿಂದ ಕಾರಜೋಳ ಅವರಿಗೆ ಲೋಕೋಪಯೋಗಿ ಖಾತೆಯೊಂದನ್ನು ಮಾತ್ರ ನೀಡಿ ಸಂಪುಟದ ಸಚಿವರಲ್ಲಿ ಎದುರಾಗಿರುವ ಗೊಂದಲ ಬಗೆಹರಿಸಲು ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel