Bumrah | ಬುಮ್ರಾ ಸ್ಥಾನಕ್ಕೆ ಸಿರಾಜ್ ಬೆಸ್ಟ್ ಆಪ್ಷನ್ !
ಟಿ 20 ವಿಶ್ವಕಪ್ ಗಾಗಿ ಟೀಂ ಇಂಡಿಯಾ ಸನ್ನದ್ಧವಾಗುತ್ತಿದ್ದು, ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ 13 ರನ್ ಗಳಿಂದ ಗೆಲುವು ಸಾಧಿಸಿದೆ.
ಟಿ 20 ವಿಶ್ವಕಪ್ ಗಾಗಿ ಆಯ್ಕೆಯಾದ ಟೀಂ ಇಂಡಿಯಾದ ಸ್ಟಾರ್ ಪೇಸರ್ ಜಸ್ ಪ್ರಿತ್ ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ತಂಡದಿಂದ ದೂರವಾಗಿದ್ದಾರೆ.
ಆದ್ರೆ ಅವರ ಸ್ಥಾನವನ್ನು ಭರ್ತಿ ಮಾಡುವವರು ಯಾರು ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್, ಮೊಹ್ಮದ್ ಶಮಿ ತುಂಬಾ ಕಾಲದಿಂದ ಕ್ರಿಕೆಟ್ ಗೆ ದೂರವಾಗಿದ್ದಾರೆ.
ಮತ್ತೊಂದು ಮೊಹ್ಮದ್ ಸಿರಾಜ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನವನ್ನು ಭರ್ತಿ ಮಾಡಬಲ್ಲ ಆಟಗಾರ ಯಾರು ಅಂದ್ರೆ ಸಿರಾಜ್ ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಇನ್ನು ಉತ್ತಮ ಬೌಲರ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ರೆ ಆತ ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಗೆ ದೂರವಾಗಿದ್ದಾರೆ.
ಪ್ರಸ್ತುತ ಪರಿಸ್ಥಿತಿಗೆ ಬುಮ್ರಾ ಬದಲಿಗೆ ಸಿರಾಜ್ ಬೆಸ್ಟ್ ಆಪ್ಷನ್ ಎಂದು ನನಗೆ ಅನಿಸುತ್ತಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.








