ಬಾಗಲಕೋಟೆ: ನಾಳೆ ಒಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ಮೂಲಕ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಸಾಗಿಸಲು ಕೆಎಸ್ ಆರ್ ಟಿಸಿ ಸನ್ನದ್ಧವಾಗಿದೆ ಎಂದರು. ಅನೇಕ ಕಾರಣಗಳಿಂದ ನಮ್ಮ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದೆ. ಬೇರೆ ರಾಜ್ಯದಲ್ಲಿ ಟಿಕೆಟ್ ದರ ದುಪ್ಪಟ್ಟು ಮಾಡಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ ಟಿಕೆಟ್ ದರ ಹೆಚ್ವುಮಾಡದೇ, ಅದೇ ದರದಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ರಾಜ್ಯದ ಸುತ್ತಮುತ್ತಲಿರುವ ರಾಜ್ಯಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ನೆರೆಯ ಆಂಧ್ರಕ್ಕೆ ಬಸ್ ಸಂಚಾರ ಶುರು ಮಾಡುತ್ತೇವೆ. ಆದ್ರೆ ಸಂಚಾರ ಆರಂಭಿಸುವ ಬಗ್ಗೆ ಮಹಾರಾಷ್ಟ್ರಕ್ಕೆ ನಾವು ಯಾವುದೇ ಪತ್ರ ಬರೆದಿಲ್ಲ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗದ ವಲಯಗಳಿಗೆ ಮಾತ್ರ ಬಸ್ ಸಂಚಾರವಾಗಲಿದೆ ಎಂದರು.








