ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಕುಂದಾಪುರ
ಉಡುಪಿ : ಶುಕ್ರವಾರಿ ತಡ ರಾತ್ರಿ ಕುಂದಾಪುರದಲ್ಲಿ ನೆತ್ತರು ಹರಿದಿದೆ. ಹಣಕಾಸು ವಿಚಾರಕ್ಕೆ ಉದ್ಯಮಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
35 ವರ್ಷದ ಉದ್ಯಮಿ ಕೂಡಾಲ್ ಅಜೇಂದ್ರ ಶೆಟ್ಟಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ನಗರದ ಅಸೋಡಿನ ಅಜೇಂದ್ರ ಫೈನಾನ್ಸ್ ನಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಜೇಂದ್ರ ಶೆಟ್ಟಿ ಸ್ವತಃ ಫೈನಾನ್ಸ್ ನಡೆಸುತ್ತಿದ್ದು, ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.