ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಆದರೆ ಸೋಂಕಿತರ ಚಿಕಿತ್ಸೆ ಗೆ ಮೀಸಲಿಟ್ಟಿದ್ದ ಹಾಸಿಗೆಗಳು ಭರ್ತಿ ಆಗಿದೆ. ಇದೆ ಹೊತ್ತಿನಲ್ಲಿ ರಾಜ್ಯ ಸರ್ಕಾರ ಸಚಿವರು ಮತ್ತು ಶಾಸಕರಿಗಾಗಿ ಕೊರೊನಾ ಚಿಕಿತ್ಸೆ ಪಡೆಯಲು ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡುವಂತೆ ಆದೇಶ ಹೊರಡಿಸಿ ವಿವಾದ ಸೃಷ್ಟಿಸಿದೆ.
ಕುಮಾರಕೃಪ ಅತಿಥಿಗೃಹದಲ್ಲಿ ಸಚಿವರು ಮತ್ತು ಶಾಸಕರಿಗಾಗಿ 100 ಹಾಸಿಗೆಯುಳ್ಳ ಕೊರೊನಾ ಚಿಕಿತ್ಸಾ ಕೇಂದ್ರ ಮೀಸಲಿಡಬೇಕೆಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆದೇಶ ಹೊರಡಿಸಿದೆ. ಈ ಆದೇಶ ವಿವಾದಕ್ಕೆ ಕಾರಣವಾಗಿದೆ.
ಆದೇಶದ ಪ್ರಕಾರ ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಿ ನೌಕಕರಿಗೆ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅಲ್ಲದೆ ಆಸ್ಪತ್ರೆಗಳಲ್ಲಿ ಜನಪ್ರತಿನಿಧಿಗಳು ದಾಖಲಾದರೆ ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಜೊತೆಗೆ ಹೋಟೆಲ್ ಮತ್ತು ಆಸ್ಪತ್ರೆಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಇಲ್ಲಿ ಚಿಕಿತ್ಸೆ ಲಭ್ಯವಾಗುತ್ತದೆ ಎಂದು ಈ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಜನಪ್ರತಿನಿಧಿಗಳಿಗೆ ಒಂದು ನ್ಯಾಯ, ಸಾರ್ವಜನಿಕರಿಗೆ ಒಂದು ನ್ಯಾಯನಾ ಎಂಬ ಚರ್ಚೆ ಶುರುವಾಗಿದೆ.