ಕೊಹ್ಲಿ ಕಪ್ತಾನನ ಆಟ ವ್ಯರ್ಥ : ಸರಣಿಯಲ್ಲಿ ಇಂಗ್ಲೆಂಡ್ ಮೇಲುಗೈ

1 min read
England

ಕೊಹ್ಲಿ ಕಪ್ತಾನನ ಆಟ ವ್ಯರ್ಥ : ಸರಣಿಯಲ್ಲಿ ಇಂಗ್ಲೆಂಡ್ ಮೇಲುಗೈ

ಅಹ್ಮದಾಬಾದ್ : ಮೂರನೇ ಟಿ 20 ಪಂದ್ಯದಲ್ಲಿ ಗೆಲುವೊಂದೇ ಮಂತ್ರದೊಂದಿಗೆ ಕಣಕ್ಕಿಳಿದಿದ್ದ ಭಾರತ ಮತ್ತು ಇಂಗ್ಲೆಂಡ್ ಗಳ ಜಿದ್ದಾಜಿದ್ದಿ ಹೋರಾಟದಲ್ಲಿ ಆಂಗ್ಲರು ಗೆಲುವು ಸಾಧಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ 8 ವಿಕೆಟ್ ಘಲ ಭರ್ಜರಿ ಜಯ ಸಾಧಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಿಂದಲೂ ರನ್ ಗಳಿಸಲು ಪರದಾಡುತ್ತಾ ಸಾಗಿತು. ಅದರಲ್ಲೂ ಅಚ್ಚರಿಯಂತೆ ತಂಡದಲ್ಲಿ ಸ್ಥಾನಪಡೆದಿದ್ದ ರಾಹುಲ್ ಈ ಪಂದ್ಯದಲ್ಲೂ ಸೊನ್ನೆ ಸುತ್ತಿದ್ರು.

ನಾಲ್ಕೇ ಎಸೆತ ಎದುರಿಸಿ ಖಾತೆ ತೆರೆಯದೆ ವುಡ್ ಎಸೆತದಲ್ಲಿ ರಾಹುಕ್ ಬೌಲ್ಡ್ ಆದರು. ಇದಾದ ಬಳಿಕ ವುಡ್ ತಮ್ಮ ಮುಂದಿನ ಓವರಿನಲ್ಲೇ ಸರಣಿಯಲ್ಲಿ ಮೊದಲ ಸಲ ಕ್ರೀಸ್ ಗೆ ಬಂದ ರೋಹಿತ್ ಶರ್ಮ ಅವರಿಗೆ (15) ರನ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಕಳೆದ ಪಂದ್ಯದ ಹೀರೋ ಇಶಾನ್ ಕಿಶನ್ ನಾಲ್ಕೇ ರನ್ ಗಳಿಗೆ ಆಟ ಮುಗಿಸಿದ್ರು. ಪವರ್ ಪ್ಲೇ ಅವಧಿಯಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ ಕೇವಲ 24 ರನ್ ಮಾಡಿತ್ತು.

ಈ ಸಂಕಷ್ಟದ ಸ್ಥಿತಿಯಲ್ಲಿ ತಂಡಕ್ಕೆ ನೆರವಾದ ನಾಯಕ ವಿರಾಟ್ ಕೊಹ್ಲಿ ಪಂತ್ ಜೊತೆಗೂಡಿ ಎಚ್ಚರಿಕೆಯ ಆಟವಾಡಿದ್ರು. ಇನ್ನೇನು ಭಾರತ ಅಬ್ಬರಿಸುತ್ತೆ ಅನ್ನುವಷ್ಟರಲ್ಲಿ ಪಂತ್ ರನ್ ಔಟ್ ಆದ್ರು. ಪಂತ್ ಗಳಿಕೆ 20 ಎಸೆತಗಳಿಂದ 25 ರನ್ (3 ಬೌಂಡರಿ).

England

ಪಂತ್ ಔಟ್ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ್ರು. ಈ ಮಧ್ಯೆ ವಿರಾಟ್ ಗೆ ಸಾಥ್ ನೀಡಬೇಕಿದ್ದ ಅಯ್ಯರ್ 9 ರನ್ ಗಳಿಗೆ ಆಟ ಮುಗಿಸಿದ್ರು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯ ಎಂದಿನಂತೆ ತಮ್ಮ ಆಟವಾಗಿದ್ರು. ಕೊನೆಯ ಐದು ಓವರ್ ಗಳಲ್ಲಿ ವಿರಾಟ್ ಪಾಂಡ್ಯ ಜೋಡಿ ಆಂಗ್ಲರಿಗೆ ಬೆವರಿಸಿತು. 33 ಎಸೆತಗಳನ್ನ ಎದುರಿಸಿದ ಈ ಜೋಡಿ ದಾಖಲೆಯ 70 ರನ್ ಕಲೆ ಹಾಕಿತು. ಈ ಮಧ್ಯೆ ವಿರಾಟ್ ಅರ್ಧಶತಕ ದಾಖಲಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 156 ರನ್ ಗಳಿಸಿತು. ವಿರಾಟ್ 46 ಎಸೆತಗಳಿಂದ 77 ರನ್ ಬಾರಿಸಿದರು. ಪಾಂಡ್ಯ 15 ಎಸೆತಗಳಿಂದ 17 ರನ್ ಮಾಡಿದರು.

ಈ ಗುರಿಯನ್ನ ಬೆನ್ನಟ್ಟಿದ್ದ ಇಂಗ್ಲೆಂಡ್ ಗೆ ಜಾಸ್ ಬಟ್ಲರ್ ಬೊಂಬಾಟ್ ಆರಂಭ ನೀಡಿದ್ರು. ಜಾಸ್ ಬಟ್ಲರ್ ಕ್ರೀಸ್ ಆಕ್ರಮಿಸಿಕೊಂಡು ಅಜೇಯ 83 ರನ್ ಹೊಡೆದರು. ಇವರೊಂದಿಗೆ ಜಾನಿ ಬೇರ್‍ಸ್ಟೊ 40 ರನ್ ಮಾಡಿ ಔಟಾಗದೆ ಉಳಿದರು. ಇಂಗ್ಲೆಂಡ್ 18.2 ಓವರ್‍ಗಳಲ್ಲಿ ಕೇವಲ ಎರಡೇ ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಿ ಗೆಲುವಿನ ಹಳಿ ಏರಿತು.

ಭಾರತದ ಪರ ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು. ಇವರು ಕ್ರಮವಾಗಿ ಜಾಸನ್ ರಾಯ್ (9) ಮತ್ತು ಡೇವಿಡ್ ಮಾಲನ್ (18) ವಿಕೆಟ್ ಉರುಳಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd