ADVERTISEMENT
Sunday, December 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅರ್.ಆರ್ ನಗರ, ಶಿರಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್..!

admin by admin
September 29, 2020
in Newsbeat, Politics, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ನ.3ಕ್ಕೆ ಉಪಚುನಾವಣೆ, ನ.10ಕ್ಕೆ ಫಲಿತಾಂಶ
ಅ.9ರಂದು ಚುನಾವಣಾ ಅಧಿಸೂಚನೆ
ಅ.16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಅ..19 ನಾಮಪತ್ರ ವಾಪಸ್‍ಗೆ ಕಡೆಯ ದಿನ
ಬೆಂಗಳೂರು: ಲಾಕ್‍ಡೌನ್ ಬಳಿಕ ರಾಜ್ಯದಲ್ಲಿ ಚುನಾವಣಾ ಜ್ವರ ಏರಲು ಕೇಂದ್ರ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡಿದೆ. ರಾಜರಾಜೇಶ್ವರಿ ನಗರ(ಆರ್.ಆರ್ ನಗರ) ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ಆರ್‍ಆರ್ ನಗರ, ಶಿರಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರ ಬೀಳಲಿದೆ. ಅಕ್ಟೋಬರ್ 9ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಅಕ್ಟೋಬರ್ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರೆ, ಅಕ್ಟೋಬರ್ 19 ನಾಮಪತ್ರ ವಾಪಸ್‍ಗೆ ಕೊನೆಯ ದಿನವಾಗಿದೆ.
ಶಿರಾ ಶಾಸಕರಾಗಿ ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ಬಿ.ಸತ್ಯನಾರಾಯಣ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಆರ್.ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ನಿರ್ಮಾಪಕರೂ ಆದ ಮುನಿರತ್ನ ಆಯ್ಕೆಯಾಗಿದ್ದರು. ಆಪರೇಶನ್ ಕಮಲಕ್ಕೆ ಒಳಗಾದ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಆದರೆ, ಮುನಿರತ್ನ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಹೈಕೋರ್ಟ್‍ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕಳೆದ ವರ್ಷದ ಡಿಸೆಂಬರ್‍ನಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ಆರ್.ಆರ್ ನಗರ ಕ್ಷೇತ್ರಕ್ಕೆ ನಡೆಯಲಿಲ್ಲ. ಬಳಿಕ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ತಕರಾರು ಅರ್ಜಿಯನ್ನು ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನಲ್ಲಿ ಉಪಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿತ್ತು. ಆದರೆ, ಕೊರೊನಾ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್.ಆರ್ ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಿಗಧಿಯಾಗಿರಲಿಲ್ಲ.
ನಿನ್ನೆಯಷ್ಟೇ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಇದ್ದ ಅಡ್ಡಿಯೂ ನಿವಾರಣೆಯಾಗಿದೆ. ಬಿಜೆಪಿ ಆಪರೇಶನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಹೈಕೋರ್ಟ್‍ನಲ್ಲಿ ದೂರು ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಕರಾರು ಅರ್ಜಿಯನ್ನು ನಿನ್ನೆ ವಜಾಗೊಳಿಸಿದೆ.
ಆದರೆ, ಚುನಾವಣಾ ಆಯೋಗ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಇನ್ನೂ ದಿನಾಂಕ ಪ್ರಕಟಿಸಿಲ್ಲ. ಈ ವಾರ ಅಥವಾ ಮುಂದಿನ ವಾರ ಮಸ್ಕಿ ಉಪಚುನಾವಣೆಗೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Related posts

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

December 14, 2025
ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

December 14, 2025
Tags: by electionRR NagarSira
ShareTweetSendShare
Join us on:

Related Posts

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

by Shwetha
December 14, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಎದ್ದಿರುವ ಗೊಂದಲದ ಅಲೆಗಳು ಇನ್ನೂ ತಣ್ಣಗಾಗಿಲ್ಲ. ಹೈಕಮಾಂಡ್ ಎಷ್ಟೇ ಖಡಕ್...

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

by Shwetha
December 14, 2025
0

ಬೆಳಗಾವಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಕೇವಲ ರಾಜಧಾನಿ ಬೆಂಗಳೂರು ಮತ್ತು ತಮ್ಮ ಸ್ವಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇಂತಹ ಸಂಪುಟ ಸದಸ್ಯರನ್ನು ಇಟ್ಟುಕೊಂಡು ಸಮಗ್ರ...

ರಾಹುಲ್ ಖರ್ಗೆ ನಾಯಕತ್ವದ ವಿರುದ್ಧ ಸ್ಫೋಟಗೊಂಡ ಅಸಮಾಧಾನ ಡಿಕೆ ಶಿವಕುಮಾರ್ ಹೆಗಲಿಗೆ ರಾಷ್ಟ್ರೀಯ ಜವಾಬ್ದಾರಿ ನೀಡಲು ಸೋನಿಯಾಗೆ ಪತ್ರ

ರಾಹುಲ್ ಖರ್ಗೆ ನಾಯಕತ್ವದ ವಿರುದ್ಧ ಸ್ಫೋಟಗೊಂಡ ಅಸಮಾಧಾನ ಡಿಕೆ ಶಿವಕುಮಾರ್ ಹೆಗಲಿಗೆ ರಾಷ್ಟ್ರೀಯ ಜವಾಬ್ದಾರಿ ನೀಡಲು ಸೋನಿಯಾಗೆ ಪತ್ರ

by Shwetha
December 14, 2025
0

ನವದೆಹಲಿ: ಲೋಕಸಭೆ ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಅನುಭವಿಸುತ್ತಿರುವ ಸಾಲು ಸಾಲು ಸೋಲುಗಳು ಇದೀಗ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿವೆ. ಶತಮಾನದ...

ಕೇರಳದ ರಾಜಧಾನಿಯಲ್ಲಿ ಕಮಲ ಕಹಳೆ: 45 ವರ್ಷಗಳ ಕೆಂಪು ಕೋಟೆ ಛಿದ್ರ, ತಿರುವನಂತಪುರಂನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ

ಕೇರಳದ ರಾಜಧಾನಿಯಲ್ಲಿ ಕಮಲ ಕಹಳೆ: 45 ವರ್ಷಗಳ ಕೆಂಪು ಕೋಟೆ ಛಿದ್ರ, ತಿರುವನಂತಪುರಂನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ

by Shwetha
December 14, 2025
0

ತಿರುವನಂತಪುರಂ: ದೇವರ ನಾಡು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೃಷ್ಟಿಯಾಗಿದೆ. ದಶಕಗಳಿಂದ ಕಮ್ಯುನಿಸ್ಟ್ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ (ಯುಡಿಎಫ್) ಪಕ್ಷಗಳ ನೇರ ಹಣಾಹಣಿಗೆ ಸಾಕ್ಷಿಯಾಗಿದ್ದ ಕೇರಳದಲ್ಲಿ,...

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

by Shwetha
December 14, 2025
0

ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram