ಬಿಎಸ್ ವೈ ರಾಜೀನಾಮೆ ಸುಳಿವು ನೀಡಿದ ಬಿ.ವೈ.ರಾಘವೇಂದ್ರ
ಬೆಂಗಳೂರು : ಸಂಸದ ಬಿ.ವೈ. ರಾಘವೇಂದ್ರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಸುಳಿವು ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡಿದೆ.
ಹೈಕಮಾಂಡ್ ಹೇಗೆ ಹೇಳುತ್ತಾರೋ ಅದನ್ನು ಕೇಳುತ್ತೀನಿ. ಯಾವತ್ತು ಹೈಕಮಾಂಡ್ ಹೇಳುತ್ತೊ ಆಗ ರಾಜೀನಾಮೆ ನೀಡಲು ತಯಾರಿದ್ದೇನೆ ಎಂದು ಯಡಿಯೂರಪ್ಪನವರು ಈ ಹಿಂದೆ ಮಾಧ್ಯಮಗಳಿಗೆ ನೇರವಾಗಿ ಹೇಳಿದ್ದರು.
ಸದ್ಯ ಇಂತಹ ಸಂದರ್ಭದಲ್ಲಿ ಅವರಿಗೆ ನೈತಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಠಾಧೀಶರು ಜಾತ್ಯತೀತವಾಗಿ ಮಾಡುತ್ತಿದ್ದಾರೆ ಎಂದು ಬಿಎಸ್ ವೈ ಪರ ಮಠಾಧೀಶರು ನಿಂತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಇನ್ನು ಮಠಾಧೀಶರನ್ನು ಉಪಯೋಗಿಸಿಕೊಂಡು ಯಡಿಯೂರಪ್ಪನವರು ಲಾಬಿ ಮಾಡುತ್ತಿದ್ದಾರೆ ಎಂದು ಕೆಲವು ವ್ಯಕ್ತಿಗಳು ಹೇಳಿಕೆ ನೀಡುತ್ತಿದ್ದಾರೆ.
ಆ ತಂತ್ರ ರಾಜಕಾರಣ ಯಡಿಯೂರಪ್ಪನವರು ತಮ್ಮ ಜೀವನದಲ್ಲಿ ಇಂದಿಗೂ, ಹಿಂದೆಯೂ, ಮುಂದೆಯೂ ಮಾಡುವುದಿಲ್ಲ. ಹೀಗಾಗಿ ಹಗುರವಾಗಿ ಸ್ವಾಮೀಜಿಗಳ ಬಗ್ಗೆ ಮಾತನಾಡುವುದನ್ನು ಬಿಡಬೇಕು.
ಯಡಿಯೂರಪ್ಪನವರಿಗೆ ಬಿಜೆಪಿ ಪಕ್ಷ ಎಲ್ಲ ನೀಡಿದೆ. ಅವರಿಗೆ ತೃಪ್ತಿ ಕೂಡ ಇದೆ. ಇಲ್ಲಿಯವರೆಗೂ ಪಕ್ಷದಲ್ಲಿ ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಮುಂದೆ ಕೂಡ ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ.