ಪಿಪಿಇ ಸೂಟ್ ಧರಿಸಿ ತರಕಾರಿಗಳನ್ನು ಖರೀದಿಸಿದ ರಾಖಿ ಸಾವಂತ್

1 min read
Rakhi Sawant purchasing vegetables

ಪಿಪಿಇ ಸೂಟ್ ಧರಿಸಿ ತರಕಾರಿಗಳನ್ನು ಖರೀದಿಸಿದ ರಾಖಿ ಸಾವಂತ್

ಬಿಗ್ ಬಾಸ್ ಸೀಸನ್14 ರ ಸ್ಪರ್ಧಿ ರಾಖಿ ಸಾವಂತ್ ಯಾವಾಗಲೂ ತನ್ನ ವಿಶಿಷ್ಟ ಶೈಲಿಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಕೋವಿಡ್ -19 ರ ಸಮಯದಲ್ಲಿ ಮನೆಯಿಂದ ಹೊರಹೋಗಲು ಮತ್ತು ಸರಿಯಾದ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ರಾಖಿ ಸಾವಂತ್ ವಿಶಿಷ್ಟ ಮಾರ್ಗವನ್ನು ಅನುಸರಿಸಿದ್ದಾರೆ.
Rakhi Sawant purchasing vegetables

ರಾಖಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅಲ್ಲಿ ಅವರು ಪಿಪಿಇ ಸೂಟ್ ಧರಿಸಿ ತರಕಾರಿಗಳನ್ನು ಖರೀದಿಸಿದ್ದಾರೆ.
“ಪಿಪಿಇ” ಅಥವಾ “ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್” ವಿವಿಧ ಸಾಂಕ್ರಾಮಿಕ ಸೋಂಕುಗಳ ವಿರುದ್ಧ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಅದು ಮಾಸ್ಕ್ ಮತ್ತು ಕೈಗವಸುಗಳನ್ನು ಹೊಂದಿದ್ದು, ಇಡೀ ದೇಹವನ್ನು ರಕ್ಷಣೆ ಮಾಡುತ್ತದೆ.

“ಗೈಸ್ ದಯವಿಟ್ಟು ಸುರಕ್ಷಿತವಾಗಿರಿ, ಮತ್ತು ನೀವು ಎಲ್ಲಿಗಾದರೂ ಹೋಗಬೇಕೆಂದರೆ ಪಿಪಿಟಿ ಕಿಟ್ ಧರಿಸಿ ಹೋಗುವುದು ಉತ್ತಮ” ಎಂದು ರಾಖಿ ವೀಡಿಯೊ ಜೊತೆಗೆ ಬರೆದಿದ್ದಾರೆ.
Rakhi Sawant purchasing vegetables

ರಾಖಿ ಸಾವಂತ್ ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮರುಖ್ ಮಿರ್ಜಾ ನಿರ್ದೇಶನದ “ತವಾಯಿಫ್ ಬಜಾರ್-ಇ-ಹುಸ್ನ್” ಎಂಬ ಮುಂಬರುವ ವೆಬ್ ಸರಣಿಯ ಕೆಲಸವನ್ನು ಪ್ರಾರಂಭಿಸಿದ್ದಾರೆ.

#wearingppekits #RakhiSawant

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd