ಹಾನಗಲ್, ಸಿಂಧಗಿ ಉಪ ಕದನಕ್ಕೆ ದಿನಾಂಕ ಫಿಕ್ಸ್

1 min read
By-Election

ಹಾನಗಲ್, ಸಿಂಧಗಿ ಉಪ ಕದನಕ್ಕೆ ದಿನಾಂಕ ಫಿಕ್ಸ್ Bypolls saaksha tv

ಬೆಂಗಳೂರು : ರಾಜ್ಯದ ಹಾನಗಲ್, ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ.

ಇಂದು ಕೇಂದ್ರ ಚುನಾವಣಾ ಆಯೋಗ 14 ರಾಜ್ಯಗಳ 30 ವಿಧಾನಸಭಾ ಕ್ಷೇತ್ರ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಿದೆ.

ಈ ಪೈಕಿ ರಾಜ್ಯದ ಹಾನಗಲ್, ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 2ಕ್ಕೆ ಮತ ಎಣಿಕೆ ನಡೆಯಲಿದೆ.

Bypolls saaksha tv

ಇನ್ನು ಹಾನಗಲ್ ನಲ್ಲಿ ಸಿಎಂ ಉದಾಸಿ ಮತ್ತು ಸಿಂದಗಿ ಕ್ಷೇತ್ರದಲ್ಲಿ ಎಂಸಿ ಮನಗೂಳಿ ಅವರ ನಿಧನದಿಂದಾಗಿ ಈ ಕ್ಷೇತ್ರಗಳು ತೆರವಾಗಿದ್ದವು.

ಇನ್ನುಳಿದಂತೆ ಅಕ್ಟೋಬರ್ 1 ಅಧಿಸೂಚನೆ ಪ್ರಕಟವಾಗಲಿದ್ದು, ಅಕ್ಟೋಬರ್ 8 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲನೆ ಅಕ್ಟೋಬರ್ 11ರಿಂದ ಆರಂಭವಾದರೆ ನಾಮಪತ್ರ ವಾಪಸ್ ಗೆ ಅಕ್ಟೋಬರ್ 13 ಕೊನೆಯ ದಿನಾಂಕವಾಗಿದೆ ಎಂದು ಆಯೋಗ ತಿಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd