Bytwo Love : ಆಫೀಸ್ ಲವ್ ಸ್ಟೋರಿ ಬೈ ಟು ಲವ್ – ಕ್ಯೂಟ್ ಸಾಂಗ್ ರಿಲೀಸ್….
ಸದ್ಯ ಕನ್ನಡದ ಮೂಲಕ ಹಿಟ್ ಆಗಿ ತೆಲಗು ಚಿತ್ರರಂಗಕ್ಕೆ ಪರಿಚಿತವಾಗಿ ಕನ್ನಡ , ತೆಲುಗು ಎರೆಡೂ ಸಿನಿಮಾರಂಗದಲ್ಲೂ ಸಕ್ರಿಯರಾಗಿರುವ ಕ್ಯೂಟ್ ನಟಿ ಶ್ರೀಲಾಲಾ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.. ಇನ್ನೂ ಇತ್ತೀಚಗೆಷ್ಟೇ ಕನ್ನಡದಲ್ಲಿ ಧನ್ವೀರ್ ಹಾಗೂ ಅವರ ನಟನೆಯ ಬೈ ಟು ಲವ್ ಸಿನಿಮಾದ ರೋಮ್ಯಾಂಟಿಕ್ ಟೈಟಲ್ ಸಾಂಗ್ ರಿಲೀಸ್ ಆಗಿದೆ… ಸಾಂಗ್ ಸಖತ್ ಕ್ಯೂಟ್ , ಆಫೀಸ್ ಲವ್ ಸ್ಟೋರಿಯನ್ನ ತೋರಿಸುತ್ತದೆ..
ಹಾಡು ಈಗಿನ ಯೂತ್ಸ್ ಗಳಿಗೆ ಬಹಳ ಕನೆಕ್ಟ್ ಆಗ್ತಿದ್ದು , ನೆಟ್ಟಿಗರಂತೂ ಸಾಂಗ್ ನ ಬಹಳ ಮೆಚ್ಚಿಕೊಂಡಿದ್ದಾರೆ,,, ನಿನ್ನೆ ರಿಲೀಸ್ ಆದ ಹಾಡು ಇಂದಿಗೆ 1 ಮಿಲಿಯನ್ ಗಿಂತಲೂ ಅಧಿಕ ವೀವ್ಸ್ ಗಳನ್ನ ಪಡೆದು ಸಾಗ್ತಿದೆ..
ಈ ಹಾಡಿನಲ್ಲಿ ಲವ್ , ಫ್ರೆಂಡ್ ಶಿಪ್ , ರಿಲೇಷನ್ ಶಿಪ್ ನ ಬಗ್ಗೆ ತಿಳಿಸಲಾಗಿದೆ. ನಿರ್ದೇಶಕ ಹರಿ ಸಂತೋಷ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಸದ್ಯ ಸಿನಿಮಾದ ಮೇಲೆ ಬಹಳ ನಿರೀಕ್ಷೆಯಿದೆ.. ಜೊತೆಗೆ ಈ ಜೋಡಿಯ ಕೆಮಿಸ್ಟ್ರಿಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
2019 ರಲ್ಲಿ ಬಜಾರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ಧನ್ವೀರ್ ಗೌಡ , ಮೊದಲ ಸಿನಿಮಾ ಮೂಲಕವೇ ಜಜನರ ಮನಸೆಳೆಯುವಲ್ಲಿ ಯಶಸ್ವಿಯಾದ್ರು..
bytwo bytwo song review
ಇನ್ನೂ ನಟಿ ಶ್ರೀಲೀಲಾ ಕಿಸ್ , ಭರಾಟೆಯಂತಹ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲಗಿನಲ್ಲಿ ಅವರ ಪೆಳ್ಳಿ ಸಂಗಡ ಸಿನಿಮಾ ಲ್ ಮೋಸ್ಟ್ ರಿಲೀಸ್ ಗೆ ರೆಡಿಯಾಗಿದೆ..