C.T Ravi : ದತ್ತ ಜಯಂತಿ ಭಿಕ್ಷಾಟನೆ ನಡೆಸಿದ ಸಿ.ಟಿ ರವಿ
ಚಿಕ್ಕಮಗಳೂರು : ದತ್ತ ಜಯಂತಿ ಹಿನ್ನೆಲೆ ಶಾಸಕ ಸಿ.ಟಿ ರವಿಯವರು ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದರು. ಭಿಕ್ಷಾಟನೆ ಮೂಲಕ ಮಾಲಾಧಾರಿಗಳಿಂದ ಪಡಿಸಂಗ್ರಹ ನಡೆಸಿದರು.
ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಜನರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ -ಬೆಲ್ಲ ನೀಡಿ ಸ್ವಾಗತಿಸಿದರು.
ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ಗುರುವಾರ ಇರುಮುಡಿ ರೂಪದಲ್ಲಿ ಅದನ್ನ ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ.
20ಕ್ಕೂ ಹೆಚ್ಚು ಮಾಲಾಧಾರಿಗಳ ಜೊತೆಗೆ ಶಾಸಕ ಸಿ.ಟಿ. ರವಿ ಪಡಿ ಸಂಗ್ರಹ ಮಾಡಿದರು. ಬುಧವಾರ ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತ ಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.