ಬಾರೀ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ತೆರೆ ಬಿದ್ದಿದ್ದು, ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವರಿಗೆ ಬೇಡಿಕೆಯಿಟ್ಟಿದ್ದ ಖಾತೆಯನ್ನೇ ಕೊಟ್ರೆ ಮತ್ತೆ ಕೆಲವರಿಗೆ ನಿರಾಸೆ ಎದುರಾಗಿದೆ. ಪ್ರಾರಂಭದಿಂದಲೂ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಜಲಸಂನ್ಮೂಲ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಹಿನ್ನೆಲೆ, ಪ್ರಬಲ ಜಲಸಂಪನ್ಮೂಲ ಖಾತೆಯನ್ನ ಸಾಹುಕಾರ್ ಗೇ ನೀಡಲಾಗಿದೆ. ಇನ್ನೂ ಯಶವಂತಪುರ ಕ್ಷೇತ್ರದ ಸಚಿವ ಎಸ್.ಸೋಮಶೇಖರ್ ಅವರಿಗೆ ಕಹಿ ಅನುಭವ ಎದುರಾಗಿದೆ. ನಗರಾಭಿವೃದ್ಧಿ ಖಾತೆಗೆ ಬೇಡಿಕೆಯಿಟ್ಟಿದ್ದ ಅವರಿಗೆ ಇದೀಗ ಸಹಕಾರ ಖಾತೆ ನಿಡಲಾಗಿದೆ. ಮತ್ತೊಂದೆಡೆ ಬೈರತಿ ಬಸವರಾಜ್ ಆಸೆಗೂ ತಣ್ಣೀರು ಬಿದ್ದಿದ್ದು, ಆಸೆ ಪಟ್ಟ ಖಾತೆ ಸಿಗದೆ ಕಹಿ ಅನುಭವ ಎದುರಾಗಿದೆ..!
ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ವೋಟ್ ಬ್ಯಾಂಕ್ ಗಾಗಿ ದೇಶದ್ರೋಹಿಗಳಿಗೆ ಕಾಂಗ್ರೆಸ್ ರಕ್ಷಣೆ ಎಂದು ಛಲವಾದಿ ಆಕ್ರೋಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಈಗ ತಾರಕಕ್ಕೇರಿದ್ದು, ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಗಂಭೀರ ಆರೋಪಗಳ ಸುರಿಮಳೆಯೇ ನಡೆಯುತ್ತಿದೆ. ಕೆಪಿಸಿಸಿ...








