ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಂಪುಟ ಪುನಾರಚನೆ ಚರ್ಚೆ ಗರಿಗೆದರಿದ್ದು, ಕೆಲವು ಸಚಿವರ ಸ್ಥಾನಕ್ಕೆ ಅಪಾಯ ಎದುರಾಗಿದೆ. ಕಳಪೆ ಪ್ರದರ್ಶನ ಮತ್ತು ಪಕ್ಷದ ನಿರೀಕ್ಷೆಗಳನ್ನು ಪೂರೈಸಲು ವಿಫಲರಾದ ಸಚಿವರನ್ನು ಹೊರಗಿಡುವ ಸಾಧ್ಯತೆ ಇದೆ.ಬಲ್ಲ ಮೂಲಗಳ ಮಾಹಿತಿ ಪ್ರಕಾರ ಪಟ್ಟಿ ಈ ರೀತಿ ಇದೆ. ಇದು ಅಂತಿಮವಂತೂ ಅಲ್ಲವೇ ಅಲ್ಲ..!
ಪುನಾರಚನೆ ಲಿಸ್ಟ್‌ನಲ್ಲಿರುವ ಪ್ರಮುಖ ಸಚಿವರು..!
1. ಮಧು ಬಂಗಾರಪ್ಪ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ).
2. ಕೆ.ಎನ್. ರಾಜಣ್ಣ (ಸಹಕಾರ).
3. ಡಾ. ಎಂ.ಸಿ. ಸುಧಾಕರ್ (ಉನ್ನತ ಶಿಕ್ಷಣ).
4. ಡಾ. ಎಚ್.ಸಿ. ಮಹದೇವಪ್ಪ (ಸಮಾಜ ಕಲ್ಯಾಣ).
5. ಡೀ. ಸುಧಾಕರ್ (ಯೋಜನೆ ಮತ್ತು ಸಾಂಖ್ಯಿಕ).
6. ಆರ್.ಬಿ. ತಿಮ್ಮಾಪುರ (ಅಬಕಾರಿ).
ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ, ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೈಕಮಾಂಡ್‌ನ ತೀರ್ಮಾನವನ್ನು ಕೇಳಿ ಹೊಸ ಮುಖಗಳನ್ನು ಸೇರಿಸಲು ಸರ್ಕಾರ ಮುಂದಾಗಿದೆ.