ಉಜಿರೆಯಲ್ಲಿ ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ ಮತ್ತು ಎರಡು ಬಾಯಿಗಳ ವಿಚಿತ್ರ ಕರು ಜನನ
ಬೆಳ್ತಂಗಡಿ, ಏಪ್ರಿಲ್01 : ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಬಳಿಯ ಕೊಯ್ಯೂರು ಗ್ರಾಮವು ಒಂದು ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಜರ್ಸಿ ಹಸುವಿಗೆ ಜನಿಸಿದ ಕರು ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ ಮತ್ತು ಎರಡು ಬಾಯಿಗಳನ್ನು ಹೊಂದಿದೆ. ಇದು ಜೀವಂತವಾಗಿದ್ದು, ಹಾಲು ಮತ್ತು ನೀರನ್ನು ಅದರ ಎರಡೂ ಬಾಯಿಂದ ತಿನ್ನಲು ಪ್ರಯತ್ನಿಸುತ್ತಿದೆ. ಕರು ತುಂಬಾ ದುರ್ಬಲವಾಗಿದ್ದು, ಎದ್ದು ನಿಲ್ಲುವ ಸ್ಥಿತಿಯಲ್ಲಿಲ್ಲ.
ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಉಜಿರೆಯ ಪಶುವೈದ್ಯ ಅಧಿಕಾರಿ ಡಾ.ಕಾರ್ತಿಕ್ ಅವರ ಆರೈಕೆಯಲ್ಲಿ ಹಸುವಿನ ಪ್ರಸವ ಮಾಡಿಸಲಾಗಿದ್ದು, ಕರುವಿಗೆ ಜನ್ಮ ನೀಡಿದ ಹಸು ಆರೋಗ್ಯವಾಗಿದೆ.
ಅನೇಕ ಅಂಗಗಳನ್ನು ಹೊಂದಿರುವ ಈ ಹೆಣ್ಣು ಕರು ಹೆಚ್ಚು ಕಾಲ ಬದುಕಲಾರದು ಎಂದು ಡಾ ಕಾರ್ತಿಕ್ ಹೇಳಿದ್ದಾರೆ. ಇದು ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ, ಆದರೆ ಅದಕ್ಕೆ ಸಾಧ್ಯವಾಗುತ್ತಿಲ್ಲ. ಬಹುಶಃ ಇದು ಅವಳಿ ಕರುವಾಗಿರಬಹುದು. ಆದರೆ ಭ್ರೂಣದ ಬೆಳವಣಿಗೆಯ ಸಮಯದಲ್ಲಿ, ಅಸಹಜ ಬೆಳವಣಿಗೆಯಿಂದಾಗಿ, ಕರು ಈ ರೀತಿ ಜನಿಸುತ್ತದೆ ಎಂದು ಅವರು ಹೇಳಿದ್ದಾರೆ.
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
ಪಾಲಕ್ ಪನೀರ್ https://t.co/j2Hh1uVmAo
— Saaksha TV (@SaakshaTv) March 23, 2021
ಪಿಪಿಎಫ್, ಆರ್ಡಿ ಮತ್ತು ಸುಕನ್ಯಾ ಸಮೃದ್ಧಿ ಖಾತೆದಾರರು ತಿಳಿದಿರಬೇಕಾದ ಮಹತ್ವದ ಮಾಹಿತಿ https://t.co/jUpD4jSACx
— Saaksha TV (@SaakshaTv) March 23, 2021
ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ರೈಲ್ವೆಗಳಿಗೆ ಸುರಕ್ಷತಾ ಮಾರ್ಗಸೂಚಿ !#railway #womensafety https://t.co/M9zTo3qbc8
— Saaksha TV (@SaakshaTv) March 22, 2021
ತಲೈವಿ ಟ್ರೈಲರ್ ನಲ್ಲಿದೆ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಜಯಲಲಿತಾ ಮೇಲಿನ ಹಲ್ಲೆಯ ಘಟನೆhttps://t.co/SbWK15ZWjl
— Saaksha TV (@SaakshaTv) March 30, 2021
#Calf #Ujire