ಆನೇಕಲ್: ವ್ಯಕ್ತಿಯೊಬ್ಬ ಪೊಲೀಸ್ ಎಂದು ಹೇಳಿಕೊಂಡು ಟೋಲ್ (Toll) ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು-ಹೊಸೂರು (Bengaluru-Hosuru) ರಾಷ್ಟ್ರೀಯ ಹೆದ್ದಾರಿಯಲ್ಲಿನ ಎಲೆಕ್ಟ್ರಾನಿಕ್ ಸಿಟಿಯ Betpl ಎಲಿವೇಟೆಡ್ ಟೋಲ್ ಹತ್ತಿರ ನಡೆದಿದೆ. ಪವನ್ ಕುಮಾರ್ ಹಲ್ಲೆಗೊಳಗಾದ ಸಿಬ್ಬಂದಿ ಎನ್ನಲಾಗಿದೆ. ಟೋಲ್ ಸಿಬ್ಬಂದಿ ಪವನ್ ಕುಮಾರ್, ದ್ವಿಚಕ್ರ ವಾಹನ ಸವಾರನಿಗೆ ಟೋಲ್ ಹಣ ಕೇಳಿದ್ದಾರೆ. ಪೊಲೀಸ್ ಸಿಬ್ಬಂದಿ ಹತ್ತಿರವೇ ಹಣ ಕೇಳುತ್ತೀಯಾ ಎಂದು ಅವಾಜ್ ಹಾಕಿದ್ದಾರೆ.
ಆಗ ಪೊಲೀಸ್ ಐಡಿ ತೋರಿಸುವಂತೆ ಸಿಬ್ಬಂದಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೆಲ್ಮೆಟ್ ಹಾಗೂ ಕೈಯಿಂದ ಪವನ್ ಕುಮಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸಿಬ್ಬಂದಿಯ ತಲೆ ಹಾಗೂ ಕಿವಿಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.