ಮುಸ್ಲಿಂ ವ್ಯಾಪಾರಿಗಳಿಂದ ಚಿನ್ನ ಖರೀದಿಸದಂತೆ ಅಭಿಯಾನ
ಬೆಂಗಳೂರು: ರಾಜ್ಯದಲ್ಲಿ ಬುಗಿಲೆದ್ದಿರುವ ಧರ್ಮಯುದ್ಧಕ್ಕೆ ಮತ್ತೊಂದು ಅಭಿಯಾನ ಸೇರಿಕೊಂಡಿದೆ. ಅದು ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಹಿಂದೂ ಪರ ಸಂಘಟನೆಗಳು ಅಭಿಯಾನ ಶುರುವಾಗಿದೆ
ಹಿಜಬ್, ಹಲಾಲ್, ಅಜಾನ್ ಆಯ್ತು ಇದೀಗ ಚಿನ್ನ ಖರೀದಿಸುವ ಕುರಿತು ಅಭಿಯಾನ ಶುರುವಾಗಿದೆ. ಮೇ 3ರಂದು ಅಕ್ಷಯ ತೃತೀಯ ಹಬ್ಬವಿದ್ದು, ಈ ವಿಶೇಷ ದಿನ ಸಾಮಾನ್ಯವಾಗಿ ಜನರು ಚಿನ್ನ ಖರೀದಿಗೆ ಮುಂದಾಗುತ್ತಾರೆ. ಆದರೆ ಚಿನ್ನವನ್ನು ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಟ್ವಿಟ್ಟರ್‌ನಲ್ಲಿ ಹಿಂದೂ ಪರ ಸಂಘಟನೆಗಳು ಅಭಿಯಾನ ಪ್ರಾರಂಭವಾಗಿದೆ.
ರಾಜ್ಯದಲ್ಲಿ ಸರಿ ಸುಮಾರು ಮೂವತ್ತು ಸಾವಿರ ಚಿನ್ನದಂಗಡಿಗಳಿವೆ. ಅದರಲ್ಲಿ ಶೇಕಡಾ 30 ರಷ್ಟು ಮುಸ್ಲಿಂ ಮಾಲೀಕತ್ವದ ಮಳಿಗೆಗಳಿದ್ದು, ಬಹುತೇಕ ಮುಸ್ಲಿಂ ವ್ಯಾಪಾರಿಗಳು ಕೇರಳ ಮೂಲದ ಮುಸ್ಲಿಂ ವ್ಯಾಪಾರಿಗಳಾಗಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ವ್ಯಾಪಾರ ಡಲ್ ಆಗಿತ್ತು. ಆದರೆ ಈ ವರ್ಷದ ಅಕ್ಷಯ ತೃತೀಯಕ್ಕೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಚಿನ್ನದ ಅಂಗಡಿ ಮಾಲೀಕರಿದ್ದಾರೆ.
ಆದರೆ ಅಭಿಯಾನದಿಂದ ಯಾರಿಗೆ ನಷ್ಟ, ಯಾರಿಗೆ ಲಾಭ ಎನ್ನುವ ಲೆಕ್ಕಾಚಾರ ಆರಂಭವಾಗಿದ್ದು, ಒಂದು ವೇಳೆ ಅಭಿಯಾನ ಸಕ್ಸಸ್ ಆದರೆ, ಮುಸ್ಲಿಂ ವ್ಯಾಪಾರಿಗಳಿಗೆ ತುಂಬಲಾರದ ನಷ್ಟವಾಗುತ್ತದೆ. ಅಕ್ಷಯ ತೃತೀಯ ದಿನದಂದೇ ರಾಜ್ಯಾದ್ಯಂತ ಬರೋಬ್ಬರಿ ಒಂದು ಸಾವಿರ ಕೋಟಿ ವ್ಯಾಪಾರವಾಗುವ ನಿರೀಕ್ಷೆಯನ್ನು ಮಾಲೀಕರು ಹೊಂದಿದ್ದಾರೆ. ಈ ಅಭಿಯಾನಕ್ಕೆ ಹಿಂದೂ ಪರ ಸಂಘಟನೆಗಳು ಸಾಥ್ ನೀಡುತ್ತಾರಾ ಕಾದು ನೋಡಬೇಕಾಗಿದೆ.