ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (KR Nagara Victim Kidnap Case) ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ವಜಾ ಆಗಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಕೂಡ ಎಸ್ ಐಟಿ ಯಾವುದೇ ಸಂದರ್ಭದಲ್ಲಾದರೂ ಬಂಧಿಸಬಹುದು ಎನ್ನಲಾಗುತ್ತಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ, ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ.
ಸದ್ಯ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ರೇವಣ್ಣ ಜೈಲಿಗೆ ಹೋದರೂ ಭೇಟಿಯಾಗಿಲ್ಲ. ಇತ್ತ ರೇವಣ್ಣ ಕೂಡ ಜೈಲಿನಿಂದ ಬಂದರೂ ಪತ್ನಿಯನ್ನು ಭೇಟಿ ಮಾಡಿಲ್ಲ. ಅಜ್ಞಾತವಾಸಿಯಾಗಿರುವ ಭವಾನಿ ರೇವಣ್ಣಗೆ ವಿಶೇಷ ತನಿಖಾ ತಂಡ (SIT) ನೋಟಿಸ್ ನೀಡಿದ್ದು, ನಾಳೆ ತನಿಖೆ ಎದುರಿಸುವಂತೆ ಹೇಳಿದೆ.
ಇನ್ನೊಂದೆಡೆ ಎಸ್ ಐಟಿ, ಜೂನ್ 1ರಂದು ಬೆಳಿಗ್ಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆ ಒಳಗೆ ಮಹಿಳಾ ಅಧಿಕಾರಿಗಳೊಂದಿಗೆ ನಿಮ್ಮ ಮನೆಗೆ ಬರುತ್ತೇವೆ. ಈ ವೇಳೆ ನೀವು ಮನೆಯಲ್ಲಿ ಖುದ್ದು ಹಾಜರು ಇರಬೇಕು ಎಂದು ನೋಟಿಸ್ ನೀಡಿದೆ.