ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ : 3ಸಾವು!
ಚಿತ್ರದುರ್ಗದ ಗುಯಿಲಾಳು ಟೋಲ್ ಗೇಟ್ ಬಳಿ ಘಟನೆ
ಕಾರು ಚಾಲಕನ ಅಜಾಗೃತಕತೆಯಿಂದ ಅಪಘಾತ
ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ Car collides with tanker three dead on spot in chitradurga
ಚಿತ್ರದುರ್ಗ: ನಿಂತಿದ್ದ ಗ್ಯಾಸ್ ಟ್ಯಾಂಕರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಗುಯಿಲಾಳು ಟೋಲ್ ಗೇಟ್ನಲ್ಲಿ ನಲ್ಲಿ ಬೆಳಗ್ಗೆ ನಡೆದಿದೆ. 55 ವರ್ಷದ ರಮೇಶ್, 65 ವರ್ಷದ ವಿಶ್ವನಾಥ್, 45 ವರ್ಷದ ಸೀಮಾ ಮೃತಪಟ್ಟವರಾಗಿದ್ದಾರೆ. ಇವರು ಬೆಳಗಾವಿ ಮೂಲದವರಾಗಿದ್ದು, ಬೆಂಗಳೂರಿನತ್ತ ಬರುತ್ತಿದ್ದರು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಟೋಲ್ ಪಾಸ್ ಮಾಡುವ ಸಮಯದಲ್ಲಿ ಗ್ಯಾಸ್ ಟ್ಯಾಂಕರ್‌ಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಅಪಘಾತಕ್ಕೆ ಕಾರು ಚಾಲಕನ ಅಜಾಗೃತೆಯೆ ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಅಪಘಾತದ ದೃಶ್ಯಾವಳಿಗಳು ಟೋಲ್‌ಗೇಟ್‌ನಲ್ಲಿ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿದ್ದರು.
ಅಪಘಾತದಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ಕಾರನ್ನು ತೆರೆವುಗೊಳಿಸಲಾಗಿದೆ. ಜೊತೆಗೆ ಮೃತದೇಹಗಳನ್ನು ಐಮಂಗಲದ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ಸಂಬಂಧ ಸದ್ಯ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









