ಛೇ… ಒಳ್ಳೆಯ ಆರಂಭ ಸಿಕ್ಕರೂ… ಮತ್ತೆ ಅದೇ ನಿರ್ಲಕ್ಷ್ಯ careless-batting saaksha tv
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಒಳ್ಳೆಯ ಆರಂಭ ಸಿಕ್ಕಿದೆ.
ಆರಂಭಿಕರಾದ ಮಯಾಂಕ್ ಅಗರ್ ವಾಲ್, ಮತ್ತು ಕೆ.ಎಲ್ ರಾಹುಲ್ ಮೊದಲ ವಿಕೆಟ್ ಗೆ ನೂರಕ್ಕೂ ಹೆಚ್ಚು ರನ್ ಗಳ ಜೊತೆಯಾಟ ನೀಡಿದ್ದರು.
ಯಾವ ರೀತಿ ನೋಡಿದರೂ ಟೀಂ ಇಂಡಿಯಾಗೆ ಇದು ನೂರಕ್ಕೆ ನೂರ ಒಳ್ಳೆಯ ಅಡಿಪಾಯವೇ ಆಗಿತ್ತು.
ಮಯಾಂಕ್ – ರಾಹುಲ್ ಅಡಿಪಾಯವನ್ನು ಗಟ್ಟಿಯಾಗಿ ಹಾಕಿದ್ದರಿಂದ ನಂತರ ಬಂದ ಬ್ಯಾಟರ್ ಗಳು ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಬಹುದಾಗಿತ್ತು. ಆದ್ರೆ ಬಾಕ್ಸಿಂಗ್ ಡೇ ನಡೆದದ್ದೇ ಬೇರೆ.
ಹೌದು..! ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದಾಗ 60 ರನ್ ಗಳಿಸಿ ಮಿಂಚುತ್ತಿದ್ದ ಆರಂಭಿಕ ಮಯಾಂಕ್ ಅಗರ್ ವಾಲ್ ಎಂನ್ಗಿಡಿಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಕ್ರೀಸ್ ಗೆ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನಂತರದ ಎಸೆತದಲ್ಲಿಯೇ ಗೋಲ್ಡನ್ ಡಕ್ ಆದರು.
ಅಲ್ಲಿಗೆ ಟೀಂ ಇಂಡಿಯಾದ ಯಶಸ್ವಿ ರನ್ ಓಟಕ್ಕೆ ಬ್ರೇಕ್ ಬಿತ್ತು. ಈ ವೇಳೆ ರಾಹುಲ್ ಜೊತೆಗೂಡಿದ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡಿದರು.
ಒಂದು ಕಡೆ ಅರ್ಧ ಶತಕ ಸಿಡಿಸಿ ರಕ್ಷಣಾತ್ಮಕ ಬ್ಯಾಟಿಂಗ್ ಆಡುತ್ತಿದ್ದ ರಾಹುಲ್ ಒಂದೊಂದೆ ರನ್ ಪೇರಿಸುತ್ತಾ ಸೆಂಚೂರಿಗೆ ಹತ್ತಿರವಾಗುತ್ತಿದ್ದರು.
ಇತ್ತ ಒಳ್ಳೆ ಟಚ್ ನಲ್ಲಿ ವಿರಾಟ್ ಬ್ಯಾಟ್ ಬೀಸುತ್ತಿದ್ದರು. ಇನ್ನೇನು ಎಲ್ಲಾ ಸೆಟ್ ಆಯ್ತು..
ನಾಯಕ-ಉಪನಾಯಕನ ಆಟ ಮುಂದುವರೆಯುತ್ತೆ ಅನ್ನುವಷ್ಟರಲ್ಲಿ 35 ರನ್ ಗಳಿಸಿದ್ದ ವಿರಾಟ್ ಔಟ್ ಆದರು.
ಬೇಡವಾಡ ಹೊಡೆತಕ್ಕೆ ಕೈ ಹಾಕಿದ ವಿರಾಟ್, 35 ರನ್ ಗಳಿಗೆ ಪೆವಿಲಿಯನ್ ಕಡೆ ಮುಖಮಾಡಿ ಹೋದರು.
ಒಳ್ಳೆಯ ಆರಂಭ ಸಿಕ್ಕರೂ ಹೀಗೆ ಅನಾವಶ್ಯಕವಾಗಿ ವಿಕೆಟ್ ಕೈ ಚಲ್ಲಿದ್ದೇಕೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಅದರಲ್ಲೂ ಚೇತೇಶ್ವರ್ ಪೂಜಾರ ಅವರು ಡಕೌಟ್ ಆಗಿದ್ದು, ಟ್ರೋಲರ್ ಗಳಿಗೆ ಆಹಾರವಾದಂತೆ ಆಗಿದೆ.
ಇತ್ತ ಒಳ್ಳೆಯ ಟಚ್ ನಲ್ಲಿದ್ದ ವಿರಾಟ್ , ಬೇಡವಾದ ಹೊಡೆತಕ್ಕೆ ಕೈ ಹಾಕಿ ಔಟ್ ಆಗಿದ್ದಕ್ಕೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಇನ್ನು ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಎಲ್ಲಾ ಅವಧಿಗಳಲ್ಲಿ ಪ್ರಾಬಲ್ಯ ಮೆರೆದಿದ್ದು, ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.
ಕೆಎಲ್ ರಾಹುಲ್ 122 ರನ್ ಹಾಗೂ ರಹಾನೆ 40 ರನ್ ಗಳಿಸಿ ಆಡುತ್ತಿದ್ದಾರೆ.